ದೇವರ ದಾಸಿಮಯ್ಯ ಸರ್ವ ಸಮುದಾಯಗಳಿಗೆ ಮಾದರಿ

2 ckm 8
ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ದೇವರ ದಾಸಿಮ್ಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ದೇವರ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಎಚ್.ಎಂ.ನಾರಾಯಣ, ಡಾ.ರಮೇಶ್, ಶಿವರುದ್ರಪ್ಪ, ಹರೀಶ್ ಕುಮಾರ್, ಸಿ.ಟಿ.ಶಿವರಾಂ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಇಡೀ ಮಾನವ ಕುಲಕ್ಕೆ ಸನ್ಮಾರ್ಗವನ್ನು ತಮ್ಮ ವಚನಗಳ ಮೂಲಕ ಸಾರಿದ ಆದ್ಯ ವಚನಕಾರ ದೇವರ ದಾಸಿಮಯ್ಯ ಅವರು ಸರ್ವ ಸಮುದಾಯಗಳಿಗೆ ಮಾದರಿ ಎಂದು ಜಿಲ್ಲಾ ನೇಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಂ ನಾರಾಯಣ ತಿಳಿಸಿದರು.

ನಗರದ ಕುವೆಂಪು ಕಲಾಮಂದಿರದ ಹೇಮಾಂಗಣ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದೇವಾಂಗ ಸಂಘ, ಕುರುಹಿನಶೆಟ್ಟಿ ಸಂಘ, ನೇಕಾರ ಒಕ್ಕೂಟದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ದೇವರ ದಾಸಿಮಯ್ಯನವರ ೧೦೪೬ನೇ ಜಯಂತಿಯಲ್ಲಿ ದೇವರ ದಾಸಿಮ್ಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ದೇವರ ದಾಸಿಮಯ್ಯನವರು ತಮ್ಮ ಕಾಲದಲ್ಲಿಯೇ ಮಹಿಳೆ ಮತ್ತು ಪುರುಷರಿಗೆ ಸಮಾನ ಹಕ್ಕು ನೀಡಿದರು. ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿ, ದಾಸಿಮಯ್ಯನವರ ವಚನಗಳು ಮನುಷ್ಯನ ದಿಕ್ಕನ್ನೇ ಬದಲಿಸುತ್ತದೆ. ಜೀವನದ ಅನುಭವ ಅವರ ವಚನಗಳಲ್ಲಿವೆ ಎಂದು ಹೇಳಿದರು.

ವಚನಗಳ ಮೂಲಕ ಜಾತಿ, ಧರ್ಮಗಳ ವಿರುದ್ಧ ಸಿಡಿದೆದ್ದು ಎಲ್ಲರೂ ಸಮಾನರು ಎಂದು ಸಾರಿದ ದೇವರ ದಾಸಿಮಯ್ಯನವರು, ಸಾಮಾಜಿಕ ಕ್ರಾಂತಿಗೆ ಬುನಾದಿ ಹಾಕಿದದವರು. ವಿಶ್ವದ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದವರು. ಅಂಧಕಾರದಿAದ ಅಜ್ಞಾನದ ಕಡೆಗೆ ಅಂದಿನ ಶತಮಾನದಲ್ಲಿಯೇ ಹೋರಾಡಿದ ಹಿರಿಮೆ ಅವರದಾಗಿತ್ತು ಎಂದು ಶ್ಲಾಘಿಸಿದರು.

ಅಜ್ಜಂಪುರದಲ್ಲಿ ದೇವರ ದಾಸಿಮಯ್ಯ ಜಯಂತಿಯನ್ನು ವಿಜೃಂಭಣೆಯಿAದ ಆಚರಿಸಲು ನಿರ್ಧರಿಸಿದ್ದು, ಸರ್ಕಾರದ ಆದೇಶದಂತೆ ಇಂದು ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳ ತೀರ್ಮಾನದಂತೆ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಟಿ.ಶಿವರಾಂ, ಖಜಾಂಚಿ ಶಿವರುದ್ರಪ್ಪ, ರಾಜ್ಯ ನಿರ್ದೇಶಕ ಹರೀಶ್‌ಕುಮಾರ್, ಜಂಟಿ ಕಾರ್ಯದರ್ಶಿ ಸಿ.ಎಸ್.ರವಿಕುಮಾರ್, ಪತ್ರಿಕಾ ಕಾರ್ಯದರ್ಶಿ ಬಿ.ಎಂ.ಕುಮಾರ್, ಧರ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net