ದೇವರ ದಾಸಿಮಯ್ಯ ಶ್ರೇಷ್ಠ ವಚನಕಾರ

10rajesh5
Published on

ಚಾಮರಾಜನಗರ: ವಿಶ್ವದ ಪ್ರಥಮ ವಚನಕಾರರಾದ ದೇವರ ದಾಸಿಮಯ್ಯ ಶ್ರೇಷ್ಠ ವಚನಕಾರರಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ತಿಳಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದೇವರ ದಾಸಿಮಯ್ಯನವರು ಜನಪದ ಕಾಳಜಿವುಳ್ಳ ಶ್ರೇಷ್ಠ ವಚನಕಾರರು. ಮನುಕುಲವೇ ಗೌರವಿಸುವ ವಸ್ತ್ರ ನಿರ್ಮಿಸುವ ಕಾಯಕವನ್ನು ಮಾಡುವ ಮೂಲಕ ವಿಶ್ವದ ಮಾನವರು ಗೌರವದಿಂದ ಬದುಕುವ ರೀತಿಯನ್ನು ತೋರಿಕೊಟ್ಟರು. ಪ್ರಸ್ತುತ ಅವರ 176 ವಚನಗಳು ದೊರೆತಿದ್ದು, ಮತ್ತಷ್ಟು ಸಂಶೋಧನೆಗಳ ಅಗತ್ಯವಿದೆ. ಕಾಯಕ ನಿಷ್ಠೆಯನ್ನು ಬೋಧಿಸುವ ಮೂಲಕ ಕಾಯಕದ ಮಹತ್ವವನ್ನು ಸಾರಿದರು ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಕೃಷ್ಣ, ನಟರಾಜ್, ದೇವಾಂಗ ಸಮಾಜದ ವೆಂಕಟಯ್ಯನಛತ್ರ ವೆಂಕಟೇಶ್, ಪತ್ರಕರ್ತ ಚಂದ್ರಶೇಖರ್, ರಾಮಸಮುದ್ರದ ಕುಮಾರ್, ನಟರಾಜ್ ,ಅನಂತ್, ಉಮೇಶ್, ಶ್ರೀಧರ್, ಬಾಬು, ಮುರಳಿ, ರಾಜೇಶ್, ನಾಗೇಂದ್ರ, ಮುರಳಿ ಕೃಷ್ಣ, ಗೋಪಾಲಕೃಷ್ಣ, ಮಧು ,ಕನ್ನಡ ಸಾಹಿತ್ಯ ಪರಿಷತ್ತಿನ ಸರಸ್ವತಿ, ಪದ್ಮ ಪುರುಷೋತ್ತಮ್, ಆರಾಧ್ಯ, ಶಿವಲಿಂಗ ಮೂರ್ತಿ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net