

ಬೆಳಗಾವಿ: ಈ ನಾಡಿನ ದಾರ್ಶನಿಕರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದರಲ್ಲಿ ಜೀವನದ ಸಾರ್ಥಕತೆ ಅಡಗಿದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.
ನಗರದ ವಡಗಾವಿಯ ಸಫಾರಗಲ್ಲಿಯ ಬನಶಂಕರಿ ದೇವಸ್ಥಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯ ತತ್ತ$$$್ವಗಳು ಹಾಸುಹೊಕ್ಕಾಗಿ ವಿಸ್ತರಿಸಿದ್ದು ವಚನಕಾಲದ ದೊಡ್ಡ ಆಂದೋಲನವೆಂದು ಅವರು ಬಣ್ಣಿಸಿದರು. ದೇವರ ದಾಸಿಮಯ್ಯ ಅವರ ಕೊಡುಗೆ ಅಪಾರ. ತಮ್ಮ ವಚನಗಳ ಮೂಲಕ ಗುರುಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ, ಗುರುಗಳಿಗೆ ತಮ್ಮನ್ನು ತಾವು ಅರ್ಪಿಸಿಕೊಂಡ ದೇವರ ದಾಸಿಮಯ್ಯ ಅವರ ತತ್ತ$$$್ವಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಕರೆ ನೀಡಿದರು.
ಗುಳೇದಗುಡ್ಡದ ಗುರುಸಿದ್ಧೇಶ್ವರ ಬೃಹನ್ಮಠ, ಪಟ್ಟಸಾಲಿ ಗುರುಪೀಠದ 1008 ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಮಾತನಾಡಿ, ಶರಣ ದೇವರ ದಾಸಿಮಯ್ಯ ಜಯಂತಿ ಉತ್ಸವ ಅರ್ಥಪೂರ್ಣ ಸಂದೇಶ ಕೊಡುವ ಜಯಂತಿ ಇದಾಗಿದೆ. ಶರಣ ದೇವರ ದಾಸಿಮಯ್ಯನವರು ಕೇವಲ ಒಂದೇ ಸಮಾಜಕ್ಕೆ ಸೀಮಿತವಾಗದೇ ವಿಶ್ವಮಾನ್ಯ ಶರಣರು ಎಂದು ಹೇಳಿದರು.
ಸಮುದಾಯದ ಮುಖಂಡ ಗಜಾನನ ಗುಂಜಾರಿ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಕನ್ನಡ ಮತ್ತು ಸಂಸತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಮೇಯರ್ ಮಂಗೇಶ ಪವಾರ, ಉಪ ಮೇಯರ್ ವಾಣಿ ವಿಲಾಸ ಜೋಶಿ, ಪ್ರೀತಿ ಕಾಮಕರ, ರೇಷ್ಮಾ ಕಾಮಕರ, ದೀಪಾಲಿ ಚೊಸಗಿ, ಲ್ಮ ಲೋಕರಿ, ಉದಯ ಉಪರಿ, ಶಿವಾನಂದ ಉಪರಿ, ಲೋಹಿತ ಮೋರಕರ, ಬಸವರಾಜ ಢವಳಿ, ವೆಂಕಟೇಶ ವನಹಳ್ಳಿ, ಮಾರುತಿ ಬಂಗೋಡಿ, ಕಿಶೋರ ಬಡಗಾವಿ, ಪ್ರಸನ್ನ ಲಟ್ಟಿ, ರಮೇಶ ಸೊಂಟಕ್ಕಿ, ಬಸವರಾಜ ಜಡಪನ್ನವರ, ವಿ.ಜಿ. ನೀರಲಗಿಮಠ ಇತರರಿದ್ದರು.