

ಹಾಸನ: ಹಾಸನ ತಾಲ್ಲೂಕಿನ ಪುರದಮ್ಮ ದೇವಸ್ಥಾನದಲ್ಲಿ ದೇವರಿಗೆ ನೈವೇದ್ಯ ಮಾಡಿ ನಮಸ್ಕರಿಸಲು ದೇವಸ್ಥಾನದ ಒಳಗೆ ಹೋದಾಗ ಅವರ ಜೇಬಿನಲ್ಲಿದ್ದ 20,000 ಹಣವನ್ನು ಯಾರೋ ಕಳ್ಳರು ಕಳವು ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲೆ, ಭದ್ರಾವತಿ ತಾಲೂಕಿನ ಶಾಂತಿನಗರ ವಾಸಿ ಪರಮೇಶ್ವರಪ್ಪ ಅವರು ಕುಟುಂಬಸಮೇತ ಭಾನುವಾರ ಬೆಳಗ್ಗೆ ಹಾಸನ ತಾಲೂಕಿನ ಪುರದಮ್ಮ ದೇವಸ್ಥಾನಕ್ಕೆ ಬಂದಿದ್ದಾರೆ. ಹರಕೆ ಅಡುಗೆ ಮಾಡಲು ಒಂದು ರೂಂ ಬಾಡಿಗೆ ತೆಗೆದುಕೊಂಡು ಅಡುಗೆ ಮಾಡಿ ದೇವರಿಗೆ ನೈವೇದ್ಯ ಮಾಡಿ ನಮಸ್ಕರಿಸಲು ದೇವಸ್ಥಾನದ ಒಳಗೆ ಹೋದಾಗ ಅವರ ಜೇಬಿನಲ್ಲಿದ್ದ 20,000 ಹಣವನ್ನು ಕಳ್ಳರು ಎಗರಿಸಿದ್ದಾರೆ. ಕಳುವಾಗಿರುವ ಹಣವನ್ನು ಹುಡುಕಿಕೊಡಬೇಕೆಂದು ಪರಮೇಶ್ವರಪ್ಪ ಅವರು ಹಾಸನ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.