ದೇವರ ಕಾಡಿಗೆ ಧೂಪಾಲಂಕಾರ ಅಭಿಯಾನಕ್ಕೆ ಚಾಲನೆ

14 gkp 01
ವಿ. ಬಾಡಗ ಗ್ರಾಮದ ದೇವರಕಾಡಿನಲ್ಲಿ ಕಾಡು ಜಾತಿಯ ಧೂಪ ಗಿಡ ನೆಡಲಾಯಿತು.
Published on

ಗೋಣಿಕೊಪ್ಪ: ವಿ.ಬಾಡಗ ಗ್ರಾಮದ ಶ್ರೀ ಜೋಡು ಭಗವತಿ ಮತ್ತು ಮಹಾದೇವರ ದೇವಸ್ಥಾನ ಹಾಗೂ ಅಯ್ಯಪ್ಪ ದೇವಸ್ಥಾನದ ದೇವರಕಾಡಿನಲ್ಲಿ ಮರೋಡಿ ಯುವಕ ಸಂಘ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಸಹಯೋಗದೊಂದಿಗೆ ‘ದೇವರ ಕಾಡಿಗೆ ಧೂಪಾಲಂಕಾರ’ ಎಂಬ ಪ್ರಕೃತಿ ಹಾಗೂ ಸಂಸ್ಕೃತಿಯನ್ನು ಬೆಸೆಯುವ ವಿಶೇಷ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆಯ ನಿಕಟಪೂರ್ವ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಕಾಡು ಜಾತಿಯ ಧೂಪ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net