

ಕಾರ್ಗಲ್: ಭಾರತ ದೇಶವು ಧಾರ್ಮಿಕತೆ ಮೇಲೆ ನಂಬಿಕೆ ಹೊಂದಿರುವ ದೇಶ. ದೇವರನ್ನು ಪೂಜಿಸಿ, ಆರಾಸುವುದು ನಮ್ಮ ಪರಂಪರೆ. ಶ್ರೀಮಂತನಾಗಲಿ, ಬಡವನಾಗಿರಲಿ ತನ್ನಲ್ಲಿ ಇದ್ದುದನ್ನು ನೀಡಿ ಸೇವೆ ಮಾಡುವ ಭಾವ ನಮ್ಮದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಹುಕ್ಲು ಕಾಳಿಬೀಡು ಶ್ರೀ ಕಾಳಿಕಾಂಬಾ ದೇವಿಯ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವದ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂದು ಅತ್ಯಂತ ಸಣ್ಣ ಗ್ರಾಮಗಳಲ್ಲೂ ಕೋಟ್ಯಂತರ ರೂ. ವೆಚ್ಚದ ದೇವಾಲಯಗಳನ್ನು ಕಾಣಬಹುದು. ಎಂತಹ ಬಡವನಾಗಿರಲಿ, ದೇವರ ವಿಚಾರ ಬಂದಾಗ ಉದಾರವಾಗಿ ತನ್ನಲ್ಲಿ ಇದ್ದುದನ್ನು ಕಾಣಿಕೆಯಾಗಿ ಸಮರ್ಪಿಸುತ್ತಾನೆ ಎಂದರು.
ಶರಾವತಿ ಯೋಜನೆಯಿಂದ ಹಿನ್ನೀರ ಭಾಗದಲ್ಲಿ ಮುಳುಗಡೆಯಾಗಿ ಸಂತ್ರಸ್ತರಾದವರ ವ್ಯಾಪ್ತಿ ಶರಾವತಿ ಕಣಿವೆಯ ಈ ಭಾಗದಿಂದ ಆರಂಭವಾಗಿ ಹೊಸನಗರ ತಾಲೂಕಿನ ಕಟ್ಟಕಡೆಯ ಗ್ರಾಮದವರೆಗೆ ತುಂಬ ದೊಡ್ಡದಿದೆ. ತಾಲೂಕಿನ ಈ ಭಾಗದಲ್ಲಿ ಈಗಾಗಲೇ ರಸ್ತೆ ಅಭಿವೃದ್ಧಿಗೆ ಕೆಪಿಸಿಯ ಸ್ಥಳೀಯ ಪ್ರದೇಶ ಅಭಿವೃದ್ಧಿ ಅಡಿಯಲ್ಲಿ ಸುಮಾರು 8 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಈ ಬಾರಿ ತೀರಾ ಹಾಳಾಗಿರುವ ಇಲ್ಲಿನ ಹುಕ್ಲು, ಇಂದ್ರೋಡಿಮನೆ, ಕುಡುಗುಂಜಿ, ವಟ್ಟಕ್ಕಿ ರಸ್ತೆಯನ್ನು ನಿರ್ಮಿಸಲಾಗುವುದು ಎಂದರು. ಹಲವು ಮುಖಂಡರು ಹಾಜರಿದ್ದರು.