ದೇಪುರ ಗ್ರಾಮದಲ್ಲಿ ಜನರ ರಕ್ತ ಮಾದರಿ ಸಂಗ್ರಹ

26BTP01
ಬೆಟ್ಟದಪುರ ಸಮೀಪದ ದೇಪುರ ಗ್ರಾಮದಲ್ಲಿ ಭುವನಹಳ್ಳಿ ಆರೋಗ್ಯ ಕೇಂದ್ರ ವತಿಯಿಂದ ಜನರ ರಕ್ತ ಮಾದರಿ ಸಂಗ್ರಹ ಮಾಡಲಾಯಿತು.
Published on

ಬೆಟ್ಟದಪುರ: ಬೆಟ್ಟದಪುರ ಸಮೀಪದ ಭುನವಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ದೇಪುರ ಗ್ರಾಮದಲ್ಲಿ ಶುಕ್ರವಾರ ರಕ್ತ ಮಾದರಿ ಸಂಗ್ರಹದ ಶಿಬಿರ ನಡೆಯಿತು.
ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ಕೆ.ಆರ್. ಶಶಿ ಮಾತನಾಡಿ, ವಿವಿಧ ಸೋಂಕಿನಿಂದ ಬರುವ ಈ ಆನೆ ಕಾಲು ರೋಗ ಸೊಳ್ಳೆಗಳು ಮತ್ತು ನೊಣಗಳಿಂದ ಹರಡುತ್ತವೆ. ಮುಂಜಾಗ್ರತಾ ಕ್ರಮವಾಗಿ ರೋಗವನ್ನು ಪತ್ತೆ ಮಾಡಲು ಕೇಂದ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ರಾತ್ರಿ ವೇಳೆಯಲ್ಲಿ ರಕ್ತದ ಮಾದರಿ ಸಂಗ್ರಹಿಸಲಾಗುತ್ತದೆ. ಜನರು ಕೂಡ ಸಂಜೆ ವೇಳೆ ಸೊಳ್ಳೆಗಳ ಕಚ್ಚುವಿಕೆಯಿಂದ ದೂರವಿರುವ ಬಗ್ಗೆ ಕಾಳಜಿ ವಹಿಸಬೇಕು. ಇನ್ನು ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಿಬಿರದಲ್ಲಿ ಸುಮಾರು 72 ಜನರಿಂದ ರಕ್ತ ಮಾದರಿ ಸಂಗ್ರಹ ಮಾಡಲಾಯಿತು. ಗ್ರಾಮ ಪಂಚಾಯಿತಿ ಸದಸ್ಯೆ ರೇಣುಕಾ, ಆರೋಗ್ಯ ನಿರೀಕ್ಷಕ ಡಿ.ಮಂಜು, ಅಂಗನವಾಡಿ ಕಾರ್ಯಕರ್ತೆ ಬಿ.ಎಂ. ಮಂಜುಳಾ, ಆಶಾ ಕಾರ್ಯಕರ್ತೆಯರಾದ ಸಾವಿತ್ರಿ, ನಾಗಮಣಿ, ರುಕ್ಮಿಣಿ, ಶೋಭಾ, ಯಶೋದಾ, ಮಂಜುಳಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net