ದೇಗುಲಗಳು ನೆಮ್ಮದಿಯ ತಾಣ

CTD 5 MLA--000000
Published on

ಚಿತ್ರದುರ್ಗ: ದೇವಾಲಯಗಳ ಅಭಿವೃದ್ಧಿಗೆ ಸರ್ಕಾರದ ಅನುದಾನದೊಂದಿಗೆ ಭಕ್ತರ ಸಹಕಾರ ಆಗತ್ಯ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ತುರುವನೂರು ಹೋಬಳಿ ಬೆಳಘಟ್ಟದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದುರ್ಗಾದೇವಿ ದೇವಾಲಯದ ಕಳಸಾರೋಹಣ ಮತ್ತು ದೇಗುಲದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿ ಗ್ರಾಮದಲ್ಲಿ ದೇವಾಲಯಗಳ ನಿರ್ಮಾಣದಿಂದ ಶಾಂತಿ ನೆಲೆಸುತ್ತದೆ ಎಂದರು.
ದೇವಾಲಯಗಳ ಅಭಿವೃದ್ಧಿಗೆ ಶಾಸಕರ ಮತ್ತು ಮುಜರಾಯಿ ಇಲಾಖೆಯಿಂದ ಅನುದಾನ ನೀಡುತ್ತೇನೆ. ಆದರೆ, ಸಂಪೂರ್ಣ ಅಭಿವೃದ್ಧಿಗೆ ಸ್ಥಳೀಯರು, ಭಕ್ತರು ಕೈ ಜೋಡಿಸಬೇಕು. ಹಣ ಇದ್ದವರೆಲ್ಲ ದಾನ ಮಾಡಲು ಸಾಧ್ಯವಿಲ್ಲ. ಸಮಾಜದ ಬಗ್ಗೆ ಕಾಳಜಿ, ದಾನದ ಮನಸ್ಸಿರಬೇಕು. 42 ಲಕ್ಷ ರೂ. ದಾನ ಮಾಡಿರುವ ಗ್ರಾಮದ ಭೀಮರೆಡ್ಡಿ ಮತ್ತು ಪತ್ನಿ ಪಾಪಮ್ಮ ಅವರ ಕಾರ್ಯ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಪಂ ಅಧ್ಯಕ್ಷೆ ಮಂಜುಶ್ರೀ, ಉಪಾಧ್ಯಕ್ಷ ರಾಮಚಂದ್ರರೆಡ್ಡಿ, ಸದಸ್ಯ ಹನುಮಂತರೆಡ್ಡಿ, ಜಿಪಂ ಮಾಜಿ ಸದಸ್ಯ ಬಾಬುರೆಡ್ಡಿ, ದಾನಿಗಳಾದ ಭೀಮರೆಡ್ಡಿ, ಪಾಪಮ್ಮ ಇದ್ದರು.
==========

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net