ದೇಗುಲಗಳಿಗೆ ಶಾಸಕ ಸಿ.ಎಸ್.ಪುಟ್ಟರಾಜು ಭೇಟಿ

10-pnp 1
Published on

ಪಾಂಡವಪುರ: ಚುನಾವಣೆ ಸಮೀಪಿಸುತ್ತಿದ್ದಂತೆ ಶಾಸಕ ಸಿ.ಎಸ್.ಪುಟ್ಟರಾಜು ಸೋಮವಾರ ಸ್ವಗ್ರಾಮದ ಅಧಿದೇವತೆಗಳಿಗೆ ಕುಟುಂಬ ಸಮೇತರಾಗಿ ವಿಶೇಷ ಪೂಜೆ ಸಲ್ಲಿಸಿದರು.
ಗ್ರಾಮದ ಶ್ರೀ ಗಣಪತಿ ದೇವಾಲಯ, ಮಾಸ್ತಮ್ಮ, ಆದಿಲಕ್ಷ್ಮೀ, ಪಟ್ಟಲದಮ್ಮ, ಶ್ರೀರಾಮ ದೇವಾಲಯಗಳಿಗೆ ಪತ್ನಿ ನಾಗಮ್ಮ ಹಾಗೂ ಕುಟುಂಬ ಸಮೇತ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಏ. 18ರಂದು ಶುಭ ಮೂಹೂರ್ತದಲ್ಲಿ ನಾಮಪತ್ರ ಸಲ್ಲಿಸಲಾಗುವುದು. ಪ್ರತಿ ಬಾರಿಯೂ ಮಂಗಳವಾರ ನಾಮಪತ್ರ ಸಲ್ಲಿಸಲಾಗುತ್ತಿದ್ದು, ಎಂದಿನಂತೆ ಈ ಬಾರಿಯೂ ಮಂಗಳವಾರವೇ ನಾಮಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಮತ್ತು ರೈತ ಸಂಘ ಈ ಹಿಂದಿನಿಂದಲೂ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದೆ. ಈ ಬಾರಿಯೂ ಅದೇ ರೀತಿ ಮೈತ್ರಿ ಏರ್ಪಟ್ಟಿದೆ. ಯಾರು ಯಾವ ರೀತಿ ಷಡ್ಯಂತ್ರ ಮಾಡಿದರೂ ಈ ಬಾರಿ ಕ್ಷೇತ್ರದ ಜನ ನನ್ನ ಕೈಹಿಡಿಯುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ನಾಮಪತ್ರ ಸಲ್ಲಿಕೆ ದಿನ ಕ್ಷೇತ್ರದ ಸಾವಿರಾರು ಮತದಾರರು ಭಾಗವಹಿಸಲಿದ್ದಾರೆ ಎಂದರು.
ಪುತ್ರ ಶಿವರಾಜು, ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಶಿವಕುಮಾರ್, ಸಿ.ಎ.ಲೋಕೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net