ದೇಗುಲಗಳ ಸಂರಕ್ಷಣೆಗೆ ನೂತನ ತಂತ್ರಜ್ಞಾನ ಬಳಕೆ

17-GPT-1A
ಗುಂಡ್ಲುಪೇಟೆ ತಾಲೂಕಿನ ಸ್ಕಂದಗಿರಿ ಬೆಟ್ಟದ ಪಾರ್ವತಿ ಸೋಮೇಶ್ವರ ದೇವಸ್ಥಾನ ದುರಸ್ತಿಗೆ ಅನುದಾನ ಬಿಡುಗಡೆ ಮಾಡಿದ ನಿರಂಜನಕುಮಾರ್ ಅವರನ್ನು ಗ್ರಾವಸ್ಥರು ಸನ್ಮಾನಿಸಿದರು. ರವಿಶಂಕರ್, ಲೋಕೇಶ್, ರವಿ ಇದ್ದರು.
Published on

ಗುಂಡ್ಲುಪೇಟೆ: ಪುರಾತನ ದೇವಾಲಯಗಳ ಸಂರಕ್ಷಣೆಗೆ ನೂತನ ತಂತ್ರಜ್ಞಾನ ಬಳಕೆ ಮಾಡಲಾಗುವುದು ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು.

ತಾಲೂಕಿನ ಕಂದೇಗಾಲ ಸಮೀಪದ ಸ್ಕಂದಗಿರಿ ಬೆಟ್ಟದ ಪುರಾತನ ಪಾರ್ವತಿ ಸೋಮೇಶ್ವರ ದೇವಾಲಯ ದುರಸ್ತಿಗೆ 27 ಲಕ್ಷ ರೂ. ಅನುದಾನ ನೀಡಿ ಅವರು ಮಾತನಾಡಿದರು. ಈ ದೇವಸ್ಥಾನಕ್ಕೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ಇಲ್ಲಿನ ಅಂತರಗಂಗೆ ಬತ್ತಿದ ಪರಿಣಾಮ ಕುಡಿಯುವ ನೀರಿಗೂ ಸಮಸ್ಯೆಯಾಗಿತ್ತು. ಹೀಗಾಗಿ 23 ಲಕ್ಷ ರೂ. ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸಿದ್ದರಿಂದ ಬತ್ತಿಹೋಗಿದ್ದ ಕಲ್ಯಾಣಿಯಲ್ಲಿ ನೀರು ತುಂಬಿದೆ. ದೇವಸ್ಥಾನದ ಅಭಿವೃದ್ಧ್ದಿ ಕಾಮಗಾರಿಗೆ ಸದ್ಯ 27 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಮೇಲ್ಚಾವಣಿ ದುರಸ್ತಿಗೊಳಿಸಲಾಗುವುದು. ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವುದು. ದೇವಾಲಯದ ಒಳಗೆ ಕರ್ಪೂರ ಹಾಗೂ ಊದುಬತ್ತಿ ಹಚ್ಚಿದ್ದರಿಂದ ಕಲ್ಲಿನ ಕಂಬಗಳ ಮೇಲಿನ ಲೇಪನವನ್ನು ಆಧುನಿಕ ತಂತ್ರಜ್ಞಾನದಿಂದ ತೆರವುಗೊಳಿಸಿ ಕಂಗೊಳಿಸುವಂತೆ ಮಾಡಲಾಗುವುದು. ಸ್ಥಳೀಯರು ಹೆಚ್ಚಿನ ಆಸಕ್ತಿವಹಿಸಿದರೆ ದಾನಿಗಳಿಂದಲೂ ನೆರವು ಪಡೆದು ಅಭಿವೃದ್ಧಿಪಡಿಸಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ರವಿಶಂಕರ್, ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಕೆ.ಆರ್.ಲೋಕೇಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹೊರೆಯಾಲ ಮಹೇಶ್, ನಿರ್ದೇಶಕ ಮಹದೇವಪ್ಪ, ಎಪಿಎಂಸಿ ಅಧ್ಯಕ್ಷ ರವಿ, ಗ್ರಾಮ ಪಂಚಾಯಿತಿ ಸದಸ್ಯ ಎಸ್.ಟಿ.ಮಹದೇವಸ್ವಾಮಿ, ಪಿಡಿಒ ನಾಗರಾಜಪ್ಪ, ಮುಖಂಡರಾದ ಕಂದೇಗಾಲ ನಾಗಮಲ್ಲಪ್ಪ, ಎಸ್.ಸಿ.ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net