ದೇಗುಲ ಉಳಿವಿನಿಂದ ಸಂಸ್ಕೃತಿ ಉಳಿವು

05,kkr.1
Published on

ಕಿಕ್ಕೇರಿ: ದೇಗುಲ ಪರಂಪರೆ ಉಳಿವಿನಿಂದ ಸಂಸ್ಕೃತಿ, ಸಂಸ್ಕಾರ ಮುಂದಿನ ಪೀಳಿಗೆಗೆ ಅಳಿಯದೆ ಜೋಪಾನವಾಗಲಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕಿ ಎಸ್.ರೇಣುಕಾ ತಿಳಿಸಿದರು.


ಹೋಬಳಿಯ ಅಂಕನಹಳ್ಳಿ ಗ್ರಾಮದ ಮಲ್ಲೇಶ್ವರ ದೇಗುಲವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ರದ್ಧಾಕೇಂದ್ರದಿಂದ ಇತ್ತೀಚೆಗೆ ಶ್ರಮದಾನದ ಮೂಲಕ ಶುಚಿಗೊಳಿಸಿ ಮಾತನಾಡಿದರು.


ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ಹೋಬಳಿಯ ಎಲ್ಲ ದೇಗುಲ, ಪರಿಸರವನ್ನು ಶುಚಿಗೊಳಿಸಿ, ಯುವಕರಲ್ಲಿ ದೇಗುಲ, ಸನಾತನ ಸಂಸ್ಕೃತಿಯ ಜಾಗೃತಿ ಮೂಡಿಸಲಾಗುತ್ತಿದೆ. ಶಿಥಿಲವಾದ ದೇಗುಲವನ್ನು ಜೀರ್ಣೋದ್ಧಾರ ಮಾಡಿ, ಗ್ರಾಮಗಳಲ್ಲಿ ನಿತ್ಯ ಪೂಜಾರಾಧನೆಗೆ ಅನುಕೂಲ ಕಲ್ಪಿಸುವುದು ಶ್ರದ್ಧಾ ಕೇಂದ್ರ ಯೋಜನೆಯ ಉದ್ದೇಶ ಎಂದರು.

ಶಾಲಾ ಮಕ್ಕಳು, ಸಂಸ್ಥೆಯ ಸ್ವಸಹಾಯ ಸಂಘದ ಸದಸ್ಯರು, ಗ್ರಾಮದ ಮುಖಂಡರು ಶ್ರಮದಾನದಲ್ಲಿ ಭಾಗಿಯಾಗಿದ್ದರು. ಗ್ರಾಪಂ ಸದಸ್ಯೆ ಸುಧಾ, ಒಕ್ಕೂಟದ ಅಧ್ಯಕ್ಷ ರವಿ, ಸೇವಾ ಪ್ರತಿನಿಧಿ ಗೀತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net