ದೆಹಲಿಯಲ್ಲಿ ವಿದ್ಯಾರ್ಥಿ ಸಮ್ಮೇಳನ 27ರಿಂದ

hanamant SH
Published on

ಕಲಬುರಗಿ: ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟುಡೆಂಟ್ಸ್ ಆರ್ಗನೈಸೆಷನ್‌ದಿಂದ ನ.೨೭ರಿಂದ ೨೯ರ ವರೆಗೆ ನವದೆಹಲಿಯ ತಾಲಕಟೋರಾ ಕ್ರೀಡಾಂಗಣದಲ್ಲಿ ೧೦ನೇ ಅಖಿಲ ಭಾರತ ವಿದ್ಯಾರ್ಥಿ ಸಮ್ಮೇಳನ ಜರುಗಲಿದೆ ಎಂದು ಎಐಡಿಎಸ್‌ಒ ರಾಜ್ಯ ಉಪಾಧ್ಯP್ಷÀ ಹಣಮಂತ ಎಸ್.ಎಚ್.ತಿಳಿಸಿದರು.

ರಾಜ್ಯ ಸೇರಿ ದೇಶಾದ್ಯಂತ ಸಾವಿರಾರು ವಿದ್ಯಾರ್ಥಿಗಳು, ಸಂಘಟನೆ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶಾಲೆ, ಕಾಲೇಜುಗಳ ಖಾಸಗೀಕರಣ ನಿಲ್ಲಿಸಬೇಕು, ಎಲ್ಲ ಹಂತದ ಶುಲ್ಕ ಏರಿಕೆ ತಡೆಗಟ್ಟಬೇಕು, ಸಾರ್ವಜನಿಕ ಶಿಕ್ಷಣ ಬಲಪಡಿಸಬೇಕು, ಮುಚ್ಚಿದ ಶಾಲೆಗಳನ್ನು ಪುನರಾರಂಭಿಸಬೇಕು, ಖಾಲಿ ಇರುವ ಎಲ್ಲ ಬೋಧಕ ಮತ್ತು ಬೋಧಕೇತರ ಹುz್ದÉ ಕೂಡಲೇ ಕಾಯಂ ಆಧಾರದ ಮೇಲೆ ಭರ್ತಿ ಮಾಡಬೇಕು ಎಂದು ಸಮ್ಮೇಳನದಲ್ಲಿ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.

ಎನ್‌ಟಿಎ ರದ್ದುಗೊಳಿಸಿ, ಎಲ್ಲ ಪರೀಕ್ಷಾ ಅಕ್ರಮಗಳ ಕುರಿತು ಪರಿಣಾಮಕಾರಿ ತನಿಖೆ ನಡೆಸಬೇಕು, ನಾಲ್ಕು ವರ್ಷದ ಪದವಿ ತಿರಸ್ಕರಿಸಬೇಕು, ಎನ್‌ಇಪಿ-೨೦೨೦ನ್ನು ರದ್ದುಗೊಳಿಸಬೇಕು, ಎಲ್ಲ ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್ ನೀಡಬೇಕು ಎಂದು ಹೇಳಿದರು.

ಪಠ್ಯದಲ್ಲಿ ಅವೈe್ಞÁನಿಕ ವಿಚಾರ ನಿಲ್ಲಿಸಬೇಕು, ಐತಿಹಾಸಿಕ ಸತ್ಯ ವಿರೂಪಗೊಳಿಸುವುದು ನಿಲ್ಲಿಸಬೇಕು, ಎಲ್ಲರಿಗೂ ಉದ್ಯೋಗ ಖಾತ್ರಿಪಡಿಸಬೇಕು, ಶಿಕ್ಷಣಕ್ಕಾಗಿ ಕೇಂದ್ರ ಬಜೆಟ್‌ನಲ್ಲಿ ಶೇ.೧೦ ಮತ್ತು ರಾಜ್ಯ ಬಜೆಟ್‌ನಲ್ಲಿ ಶೇ.೩೦ ಮೀಸಲಿಡಬೇಕು ಎಂದು ಆಗ್ರಹಿಸಿದರು.

ತುಳಜರಾಮ ಎನ್.ಕೆ, ವೆಂಕಟೇಶ ದೇವದುರ್ಗ, ಪ್ರೀತಿ ದೊಡ್ಡಮನಿ, ನಾಗರಾಜ ರಾವೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net