ದೆಹಲಿಯಲ್ಲಿ ಕೊಡಗಿನ ಸಂಭ್ರಮ ನೃತ್ಯ ರೂಪಕ

26Kush02
Published on

ಕುಶಾಲನಗರ: ದೆಹಲಿಯ ಕರ್ನಾಟಕ ಕನ್ನಡ ಸಂಘದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಬಾರಿಸು ಕನ್ನಡ ಡಿಂಡಿಮ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಶಾಲನಗರ ಕುಂದನ ನೃತ್ಯಾಲಯದ ಮಕ್ಕಳು ಪ್ರದರ್ಶಿಸಿದ ನೃತ್ಯ ಪ್ರದರ್ಶನ ಕಲಾ ರಸಿಕರ ಮನ ಸೆಳೆಯಿತು.


ನೃತ್ಯ ವಿದುಷಿ ವಿನುತಾ ಹೇಮಂತ್ ನೇತೃತ್ವದಲ್ಲಿ ಇತ್ತೀಚೆಗೆ ಪ್ರದರ್ಶಿಸಿದ ‘ಕೊಡಗಿನ ಸಂಭ್ರಮ’ ನೃತ್ಯ ರೂಪಕ ದೆಹಲಿ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಯಿತು.
ಕೊಡಗಿನ ಇತಿಹಾಸ ಹಾಗೂ ಆಚರಣೆಗಳ ಕುರಿತು 30 ನಿಮಿಷ ಪ್ರದರ್ಶಿಸಿದ ಮಕ್ಕಳ ನೃತ್ಯ ರೂಪಕ ಕೊಡಗಿನ ಕಲೆ ಮತ್ತು ಸಂಸ್ಕೃತಿಯನ್ನು ಅನಾವರಣಗೊಳಿಸಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಕಲಾ ವೈಭವದ ಬಗ್ಗೆ ಶ್ಲಾಘಿಸಿದರು.


ದೆಹಲಿ ಕರ್ನಾಟಕ ಸಂಘದಿಂದ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಮಕ್ಕಳ ಕಲಾ ಪ್ರತಿಭೆಗೆ ಪ್ರೇರಣೆ ಎಂದು ನೃತ್ಯ ವಿದುಷಕಿ ವಿನುತಾ ತಿಳಿಸಿದ್ದಾರೆ.
ರಶ್ಮಿ, ಮೋನಿಕಾ, ಸ್ಪಂದನಾ, ತನಿಷಾ, ಡಿ.ಎಚ್.ಖುಷಿ, ಆಲಿಯ, ನಿಷ್ಮಯ್, ತಸ್ಮಿ, ಧನ್ಯಶ್ರೀ, ಪ್ರಗನ್ಯ, ದಿಯಾ, ಸವಿತಾ, ಲಕ್ಷ್ಮೀ, ಯಶಸ್ವಿನಿ ಸೇರಿದಂತೆ ಇತರ ನೃತ್ಯಪಟುಗಳು ಪ್ರದರ್ಶಿಸಿದ ನೃತ್ಯ ರೂಪಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಪಾಲಕರಾದ ಎನ್.ವಿ.ಪರಮೇಶ್, ದಾಕ್ಷಾಯಿಣಿ, ಹೇಮಂತ್ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net