ದೆಹಲಿಯಲ್ಲಿ ಕರ್ನಾಟಕ ಮತ್ತು ಕೇರಳದ ಸರ್ಕಾರ ಹೋರಾಟಕ್ಕೆ ಸಿಪಿಐ(ಎಂ) ಪಕ್ಷದಿಂದ ಬೆಂಬಲಿಸಿ ಪ್ರತಿಭಟನೆ

ದೆಹಲಿಯಲ್ಲಿ ಕರ್ನಾಟಕ ಮತ್ತು ಕೇರಳದ ಸರ್ಕಾರ ಹೋರಾಟಕ್ಕೆ ಸಿಪಿಐ(ಎಂ) ಪಕ್ಷದಿಂದ ಬೆಂಬಲಿಸಿ ಪ್ರತಿಭಟನೆ
Published on

ಹಾಸನ: ಕೇಂದ್ರ ಸರ್ಕಾರ ಕರ್ನಾಟಕ ಮತ್ತು ಕೇರಳದ ಸರ್ಕಾರಕ್ಕೆ ಕಿರುಕುಳ ಮತ್ತು ತಾರತಮ್ಯ ನೀತಿಗಳ ಅನುಸರಿಸುತ್ತಿರುವುದನ್ನ ಖಂಡಿಸಿ ನವದೆಹಲಿಯಲ್ಲಿ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸಿ ಗುರುವಾರ ನಗರದ ಹೇಮಾವತಿ ಪ್ರತಿಮೆ ಮುಂಬಾಗ ಸಿಪಿಐ(ಎಂ) ಪಕ್ಷದಿಂದ ಪ್ರತಿಭಟನೆ ನಡೆಸಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್ ಮಾತನಾಡಿ, ಭಾರತ ಒಕ್ಕೂಟದ ತಳದಿಯಲ್ಲಿ ರಚನೆಯಾಗಿದ್ದು,ಈ ಸ್ವರೂಪಕ್ಕೆ ಕೇಂದ್ರ ಸರ್ಕಾರ ಭಂಗವನ್ನುಂಟು ಮಾಡುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕು. ಅಲ್ಲದೇ ರಾಜ್ಯಗಳಿಗೆ ಆಗುತ್ತಿರುವ ತಾರತಮ್ಯ ನೀತಿಯನ್ನ ಖಂಡಿಸಿ ಫೆ.7 ರಿಂದ 8 ರವರೆಗೆ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ನಮ್ಮ ಪಕ್ಷದಿಂದ ಬೆಂಬಲವನ್ನ ಸೂಚಿಸಲಾಗಿದೆ ಎಂದು ಹೇಳಿದರು.
ಈ ಬಾರಿ ಮಳೆಗಾಲವಿಲ್ಲದೆ ರಾಜ್ಯದಲ್ಲಿ ಬರಗಾಲ ಅವಧಿಸಿದೆ. ಆದರೆ, ರಾಜ್ಯಗಳು ತಮ್ಮ ತೆರಿಗೆ ಮತ್ತು ಸಂಪನ್ಮೂಲಗಳ ಪಾಲು ಪಡೆಯಲು ಒಕ್ಕೂಟ ಸರ್ಕಾರ ಅಡ್ಡಿ ಆಗಬಾರದು. ಈ ಕೂಡಲೇ ಕೇಂದ್ರ ಸರ್ಕಾರ ರಾಜ್ಯದ ಪಾಲನ್ನ ಬಿಡುಗಡೆ ಮಾಡಬೇಕು. ರಾಜ್ಯ ಸರ್ಕಾರವನ್ನು ಗುರಿಯಾಗಿಸಿಕೊಂಡು ಇಡಿ ಮತ್ತು ಸಿಬಿಐ ಹಾಗೂ ಆದಾಯ ತೆರಿಗೆ ವಿಭಾಗವನ್ನ ದುರ್ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರಗಳ ಆಡಳಿತದ ವಿಷಯದಲ್ಲಿ ರಾಜ್ಯಪಾಲರ ಹಸ್ತಕ್ಷೇಪ ಮತ್ತು ಸಂವಿಧಾನಾತ್ಮಕ ಸ್ಥಾನದ ದುರುಪಯೋಗವನ್ನು ತಡೆಯಬೇಕು. ರಾಜ್ಯದ ವಿಶ್ವವಿದ್ಯಾಲಯಗಳ ವಿಷಯದಲ್ಲಿ ಕುಲಪತಿಗಳನ್ನಾಗಿ ರಾಜ್ಯಪಾಲರು ಹಸ್ತಕ್ಷೇಪ ಮಾಡಬಾರದು ಮತ್ತು ಶಾಸಕಾಂಗ ಅಂಗೀಕರಿಸಿದ ಶಾಸನವನ್ನು ರಾಜ್ಯಪಾಲರು ತಡೆಹಿಡಿಯುವುದು ಮತ್ತು ಸಹಿ ಮಾಡದೆ ವಿಳಂಬ ಮಾಡದೆ ಸಹಿ ಮಾಡುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ ( ಮಾರ್ಕ್ಸ್‌ವಾದಿ) ಸ್ಥಳೀಯ ಸಮಿತಿ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಜಿಲ್ಲಾ ಸಂಘಟನಾ ಸಮಿತಿ ಸದಸ್ಯರು ಜಿ.ಪಿ. ಸತ್ಯನಾರಾಯಣ, ಎಚ್.ಆರ್. ನವೀನ್ ಕುಮಾರ್, ಅರವಿಂದ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net