ದೆಹಲಿ ಕಾರ್ಯಕ್ರಮದಲ್ಲಿ ಮಣ್ಣಿಗೆ ಪೂಜೆ

Puja to soil in Delhi event
ವಿಜಯಪುರದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ಭವನದಲ್ಲಿ ಜಿಲ್ಲಾ ಪದಾಧಿಕಾರಿಗಳು ಪ್ರಧಾನ ಆಯುಕ್ತ ಸಿದ್ದಣ್ಣ ಸಕ್ರಿ ಅವರಿಗೆ ಮಣ್ಣು ಸಂಗ್ರಹಿಸಿದ ಕಲಶ ಹಸ್ತಾಂತರಿಸಿದರು. ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಶರಣು ಸಬರದ, ಎಸ್. ಎಸ್. ಬೊಮ್ಮನಹಳ್ಳಿ, ಎಸ್. ಎಸ್. ಸಬರದ, ಪಿ.ಎಂ. ಪೂಜಾರಿ, ಎಸ್. ಸಿ. ಉಮರಾಣಿ, ಪ್ರೀತಿ ಕಾಳೆ, ಎಸ್. ಎಸ್. ಸೋಲಾಪುರ ಇದ್ದರು.
Published on

ವಿಜಯಪುರ: ಆಜಾದಿ ಕಾ ಅಮೃತ ಮಹೋತ್ಸವ ಕೇಂದ್ರ ಸರ್ಕಾರ ಆಯೋಜಿಸಿರುವ ನನ್ನ ಮಣ್ಣು ನನ್ನ ದೇಶ ಅಭಿಯಾನ ಹಿನ್ನೆಲೆಯಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಸಂಗ್ರಹಿಸಿದ ಮಣ್ಣನ್ನು ಕಲಶದಲ್ಲಿ ಶೇಖರಿಸಿ ಭಾನುವಾರ ಬೆಂಗಳೂರಿಗೆ ಬೀಳ್ಕೊಡಲಾಯಿತು.
ಸ್ಕೌಟ್ಸ್ ಭವನದ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾ ಪದಾಧಿಕಾರಿಗಳು ಮಣ್ಣು ಸಂಗ್ರಹಿಸಿದ ಕಲಶಕ್ಕೆ ಪೂಜೆ ಸಲ್ಲಿಸಿ ಜಿಲ್ಲಾ ಪ್ರಧಾನ ಆಯುಕ್ತ ಸಿದ್ದಣ್ಣ ಸಕ್ರಿ ಅವರಿಗೆ ಹಸ್ತಾಂತರಿಸಿದರು. ನಂತರ ಅಲ್ಲಿಂದ ಬೀಳ್ಕೊಡಲಾಯಿತು.

ಜಿಲ್ಲಾ ಪ್ರಧಾನ ಆಯುಕ್ತ ಸಿದ್ದಣ್ಣ ಸಕ್ರಿ ಮಾತನಾಡಿ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಕೇಂದ್ರ ಕಚೇರಿಯಲ್ಲಿ ಕರ್ನಾಟಕದ ಎಲ್ಲ ಜಿಲ್ಲೆಯ ಕಲಶ ಸಂಗ್ರಹಿಸಿ ಪೂಜೆಗೊಳಿಸಿದ ನಂತರ ದೆಹಲಿಯ ಕಾರ್ಯಕ್ರಮದಲ್ಲಿ ಪೂಜೆಗೊಳ್ಳಲಿದೆ ಎಂದು ತಿಳಿಸಿದರು.

ಸ್ಕೌಟ್ಸ್ ರಾಜ್ಯ ಪ್ರತಿನಿಧಿ ಎಸ್. ಎಸ್. ಬೊಮ್ಮನಹಳ್ಳಿ ಮಾತನಾಡಿ, ಮೇರಾ ಮಿಟ್ಟಿ ಮೇರಾ ದೇಶ ಅಭಿಯಾನದಿಂದ ಇಂದಿನ ಯುವಕರಲ್ಲಿ ನಮ್ಮ ಮಣ್ಣಿನ ಮಹತ್ವ ಮತ್ತು ಲವತ್ತತೆ ಬಗ್ಗೆ ಜಾಗೃತಿ ಮೂಡಲಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ಹೇಳಿದರು.

ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಶರಣು ಸಬರದ ಮಾತನಾಡಿ, ಇಂದಿನ ಯುವ ಪೀಳಿಗೆ ದುಶ್ಚಟಗಳಿಗೆ ಹೆಚ್ಚು ಬಲಿಯಾಗುತ್ತಿದ್ದು, ಅವರಿಗೆ ಶಾಲೆ-ಕಾಲೇಜುಗಳಲ್ಲಿ ದೇಶಪ್ರೇಮದ ಬಗ್ಗೆ ಹೆಚ್ಚಿನ ಒಲವು ತೋರಿಸುವ ಕಾರ್ಯಕ್ಕೆ ಮುಂದಾಗಬೇಕೆಂದು ತಿಳಿಸಿದರು.

ಜಿಲ್ಲಾ ಸಹ ಕಾರ್ಯದರ್ಶಿ ಎಸ್. ಎಸ್. ಸಬರದ, ಜಿಲ್ಲಾ ತರಬೇತಿ ಆಯುಕ್ತೆ ಪಿ.ಎಂ. ಪೂಜಾರಿ, ಸ್ಥಳೀಯ ಸಂಸ್ಥೆಯ ಕಾರ್ಯ ದರ್ಶಿ ಎಸ್. ಸಿ. ಉಮರಾಣಿ, ಪ್ರೀತಿ ಕಾಳೆ, ಜಿಲ್ಲಾ ಸಂಘಟನಾ ಶಿಕ್ಷಕ ಎಸ್. ಎಸ್. ಸೋಲಾಪುರ, ಜಿಲ್ಲಾ ಯುವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ ಸೇರಿ ಅನೇಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net