

ಕಲಬುರಗಿ: ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆಯ ೧೧ನೇ ವಾರ್ಷಿಕ ಕಲಾ ಪ್ರದರ್ಶನ, ಸ್ಲೆÊಡ್ ಶೋ ಸಂವಾದ, ದೃಶ್ಯ ಬೆಳಕು ಗೌರವ ಪುರಸ್ಕಾರ ಮತ್ತು ದೃಶ್ಯ ಬೆಳಕು ಪ್ರಶಸ್ತಿ ಪ್ರದಾನ ಸಮಾರಂಭ ನಗರದ ರಂಗಾಯಣದ ಡಾ.ಸಿದ್ದಯ್ಯ ಪುರಾಣಿಕ ಸಾಂಸ್ಕೃತಿಕ ಸಮುಚ್ಚಯದಲ್ಲಿ ಡಿ.೨೮, ೨೯ರಂದು ನಡೆಯಲಿದೆ ಎಂದು ಸಂಸ್ಥೆ ಅಧ್ಯಕ್ಷ ಡಾ.ಪರಶುರಾಮ ಪಿ. ತಿಳಿಸಿದರು.
೨೮ರಂದು ಸಂಜೆ ೪ಕ್ಕೆ ಕಲಾ ಪ್ರದರ್ಶನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು ಉದ್ಘಾಟಿಸಲಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಗದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯಅತಿಥಿಗಳಾಗಿ ರಂಗಾಯಣ ಕಲಬುರಗಿ ನಿರ್ದೇಶಕಿ ಡಾ.ಸುಜಾತ ಜಂಗಮಶೆಟ್ಟಿ, ಲಲಿತ ಕಲಾ ಅಕಾಡೆಮಿ ಸದಸ್ಯ ಬಸವರಾಜ ಎಲ್. ಜಾನೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ೭೦ಕ್ಕೂ ಹೆಚ್ಚಿನ ಕಲಾವಿದ ಚಿತ್ರ-ಶಿಲ್ಪಘಿ, ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ ಎಂದರು.
ವಿವಿಧ ಪ್ರಶಸ್ತಿಗೆ ಆಯ್ಕೆ: ದೃಶ್ಯ ಬೆಳಕು ಗೌರವ ಪುರಸ್ಕಾರಕ್ಕೆ ಬೆಂಗಳೂರಿನ ಹಿರಿಯ ದೃಶ್ಯ ಕಲಾವಿದ ಮೊಹ್ಮದ್ ರಿಜ್ವಾನ್ ಅವರು ಭಾಜನರಾಗಿದ್ದು, ಪ್ರಶಸ್ತಿ ೬೦೦೦ ರೂ. ನಗದು, ಪ್ರಶಸ್ತಿ ಮತ್ತು ಸ್ಮರಣ ಸಂಚಿಕೆ ಒಳಗೊಂಡಿದೆ. ವಾರ್ಷಿಕ ಕಲಾ ಸ್ಪರ್ಧೆಯ `ದೃಶ್ಯ ಕಲಾ ಬೆಳಕು' ಪ್ರಶಸ್ತಿಗೆ ರಾಯಬಾಗ್‌ನ ಆಶಾರಾಣಿ ಬಿ.ನಡೋಣಿ, ಕಲಬುರಗಿಯ ಯಲ್ಲಪ್ಪ ಕಾಂಬಳೆ, ದಾವಣಗೆರೆಯ ಓಂಕಾರ ಮೂರ್ತಿ ಬಿ.ಜಿ., ಕಲಬುರಗಿಯ ಅಖಿಲೇಶ ದೊಡ್ಡಮನಿ, ತುಮಕೂರ ಸಂದೀಪ ಡಿ.ಎಚ್., ಕಲಬುರಗಿಯ ಪ್ರತೀಕ ಭುರ್ಲಿ ವಿಜೇತರಾಗಿದ್ದಾರೆ ಎಂದು ಹೇಳಿದರು.
ಸ್ಮಾರಕ ಪ್ರಶಸ್ತಿಗಳು: ದಿ.ಮಲ್ಲಿಕಾರ್ಜುನ ಶೆಟ್ಟಿ ಸ್ಮಾರಕ ಪ್ರಶಸ್ತಿಗೆ ಮೈಸೂರಿನ ನಾಗಶಯನ, ದಿ.ಗುರುನಾಥ ಚವ್ಹಾಣ್ ಸ್ಮಾರಕ ಪ್ರಶಸ್ತಿಗೆ ಪ್ರಸನ್ನ ಶಿಲ್ಪಿ, ಟಿ.ವೈ.ಎಂಟಪ್ರೆÊಸಸ್ ದತ್ತಿ ಪ್ರಶಸ್ತಿಗೆ ಕಲಾವಿದರಾದ ಗುರುನಾಥ ಕಟ್ಟಿ, ಅಕ್ಷಯ ಬಾಹು ಸಿಂಧೆ, ವೆಂಕಟೇಶ ಟಿ., ಶ್ರೀಶೈಲ ಭಜಂತ್ರಿ, ಗುರುರಾಜ ವಗ್ಗಾ ಭಾಜನರಾಗಿದ್ದಾರೆ ಎಂದು ತಿಳಿಸಿದರು.