ದೂರು ಹಿಂಪಡೆಯಲು ಆಗ್ರಹ

srinivas shastri
Published on

ಚಾಮರಾಜನಗರ: ಕೆಆರ್‌ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಗಣೇಶ್ ವಿರುದ್ಧ ಎ್ಐಆರ್ ದಾಖಲಿಸಿರುವುದನ್ನು ಹಿಂಪಡೆಯಬೇಕೆಂದು ಪಕ್ಷದ ಮತ್ತೋರ್ವ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಶ ಶಾಸಿ ಆಗ್ರಹಿಸಿದರು.

ಗಣೇಶ್ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜ.31ರಂದು ಕೊಳ್ಳೇಗಾಲದ ಟಿ.ಪಿ.ಸರ್ಕಲ್ ಬಳಿ ನಿಂತು ೇಸ್‌ಬುಕ್ ಲೈನ್ ಮಾಡಿದ್ದರು. ಈ ವೇಳೆ ಮುಟ್ಟಾಳರು ಎಂಬ ಪದ ಬಳಕೆ ಮಾಡಿದ್ದರು. ಈ ಪದ ಅಕ್ಷಮ್ಯ ಅಪರಾಧವೂ ಅಲ್ಲ, ಅವಾಚ್ಯ ಪದವೂ ಅಲ್ಲ. ಯಾರ ಕರ್ತವ್ಯಕ್ಕೆ ಅಡ್ಡಿ, ಅಗೌರವ ಬಾರದ, ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡದ ಪದವಾಗಿದೆ. ಆದರೆ ಪೊಲೀಸ್ ಪೇದೆಯೊಬ್ಬರು ಪದಬಳಕೆಯನ್ನು ತಪ್ಪಾಗಿ ಗ್ರಹಿಸಿ ದೂರು ನೀಡಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಗಣೇಶ್ ಅವರ ಸಂಭಾಷಣೆ ಯಾರಿಗೂ ನಿಂದಿಸದ ಉದ್ದೇಶವಿಲ್ಲದ ಕಾರಣ ದಾಖಲಿಸಿಕೊಂಡಿರುವ ಪ್ರಕರಣವನ್ನು ವಾಪಸ್ ಪಡೆದುಕೊಳ್ಳಬೇಕು. ಒಂದು ವೇಳೆ ಪ್ರಕರಣ ಹಿಂಪಡೆಯದೆ ಇದ್ದರೆ ಸಮಾಜದ ಅಂಕು-ಡೊಂಕು ತಿದ್ದುವ ಸಾಮಾಜಿಕ ಕಾರ್ಯಕರ್ತರನ್ನು ಹತ್ತಿಕ್ಕುವ ಪ್ರಯತ್ನವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ ಎಂದು ಭಾವಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ಸಾಮಾಜಿಕ ಕಾರ್ಯಕರ್ತರು ಒಗ್ಗೂಡಿ ಚಳವಳಿ ರೂಪಿಸಬೇಕಾಗುತ್ತದೆ. ಕಾನೂನು ಹೋರಾಟವನ್ನೂ ಮಾಡುತ್ತೇವೆ ಎಂದರು.

ಕದಂಬ ಸೇನೆ ರಾಜ್ಯಾಧ್ಯಕ್ಷ ನಾ.ಅಂಬರೀಶ್ ಮಾತನಾಡಿ, ಕೊಳ್ಳೇಗಾಲದಲ್ಲಿ ಗಣೇಶ್ ಅವರು ೇಸ್‌ಬುಕ್‌ನಲ್ಲಿ ಲೈವ್ ಮಾಡಿದ್ದ ರಸ್ತೆ ಸಮೀಪದಲ್ಲೇ ಕೆಲವು ದಿನಗಳ ಹಿಂದೆ ಅಪಘಾತ ನಡೆದಿತ್ತು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲೈವ್ ಮಾಡಿದ್ದಾರೆ. ವಿಡಿಯೋದಲ್ಲಿ ಮುಟ್ಟಾಳರು ಎಂದು ಹೇಳಿದ್ದಾರೆ. ಇದಕ್ಕೆ ರಾಜಕೀಯ ಪ್ರೇರಿತ ಒತ್ತಡಕ್ಕೆ ಒಳಗಾದ ಪೊಲೀಸರು ಗಣೇಶ್ ವಿರುದ್ಧ ಪೇದೆ ಮೂಲಕ ದೂರು ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಅವರನ್ನು ಭೇಟಿ ಮಾಡಿ ದೂರು ವಾಪಸ್ ಪಡೆಯಲು ಕೋರಲಾಗುವುದು ಎಂದು ಹೇಳಿದರು.

ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ಗಿರೀಶ್ ಮಾತನಾಡಿ, ಪೊಲೀಸರು ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕೆಆರ್‌ಎಸ್ ಪಕ್ಷದ ಕೆಲಸಗಳು ಅರಗಿಸಿಕೊಳ್ಳಲಾಗದ ವಿಚಾರಗಳಾಗಿವೆ ಎಂದರು. ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕಂದಳ್ಳಿ ಮಹೇಶ್, ಕಾರ್ಯದರ್ಶಿಗಳಾದ ಶ್ರೀನಿವಾಸ ಬೂದಬಾಳು, ಮಾದುನಾಯಕ, ಕಾರ್ಯಕರ್ತ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net