ದೂರವಾಣಿ ನಗರದಲ್ಲಿ 75 ಲಕ್ಷ ವೆಚ್ಚದ ಪಾರ್ಕ್ ಕಾಮಗಾರಿಗೆ ಚಾಲನೆ

ದೂರವಾಣಿ ನಗರದಲ್ಲಿ 75 ಲಕ್ಷ ವೆಚ್ಚದ ಪಾರ್ಕ್ ಕಾಮಗಾರಿಗೆ ಚಾಲನೆ
Published on

ಹಾಸನ: ನಗರದ ಅರಸೀಕೆರೆ ರಸ್ತೆಯಲ್ಲಿರುವ ದೂರವಾಣಿ ನಗರದಲ್ಲಿ 75 ಲಕ್ಷ ವೆಚ್ಚದ ಪಾರ್ಕ್ ಕಾಮಗಾರಿಗೆ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಅವರು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ದೂರವಾಣಿ ನಗರದಲ್ಲಿ 75 ಲಕ್ಷ ವೆಚ್ಚದ ಪಾರ್ಕ್ ಕಾಮಗಾರಿಗೆ ಇಲ್ಲಿನ ನಿವಾಸಿಗಳ ಜೊತೆ ಸೇರಿ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಉಳಿದಂತೆ ರಸ್ತೆ, ಯುಜಿಡಿ ಸೇರಿದಂತೆ ಸಣ್ಣಪುಟ್ಟ ಕೆಲಸ ಇನ್ನು ಆಗಬೇಕಾಗಿದ್ದು, ಬಾಕಿ ಇರುವ ಕೆಲಸಗಳನ್ನು ಶೀಘ್ರದಲ್ಲಿ ಅವುಗಳನ್ನು ಪೂರ್ಣಮಾಡಲಾಗುವುದು ಎಂದರು.
ಎಚ್.ಡಿ. ಕುಮಾರಸ್ವಾಮಿ ಅವರ ಪ್ರಮಾಣ ವಚನ ಸ್ವೀಕಾರ ಆದ ವೇಳೆ ನಾವು ಕೂಡ ದೆಹಲಿಗೆ ಹೋಗಿ ಅವರ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇವು. ಹಾಸನ ವಿಚಾರವಾಗಿ ಬಹಳಷ್ಟು ಚರ್ಚೆ ಮಾಡಲಾಗಿದೆ. ಇದು ನನ್ನ ಹುಟ್ಟೂರು, ತವರೂರು ಆಗಿರುವುದರಿಂದ ಹಾಸನ ವಿಚಾರ ಬಂದರೇ ಯಾವುದೇ ಕೆಲಸವನ್ನು ಮಾಡುತ್ತೇನೆ.ಕೈಗಾರಿಕೆ ತಂದು ಜಿಲ್ಲೆಯಲ್ಲಿ ಉದ್ಯೋಗಗಳನ್ನು ಕೊಡುವ ನಿಟಿನಲ್ಲಿ ಕೆಲಸ ಮಾಡಲಾಗವುದು ಎಂದರು.
ನಗರದ ಮೇಲು ಸೇತುವೆ ಇರಬಹುದು, ವಿಮಾನ ನಿಲ್ದಾಣ ಇರಬಹುದು ಎಲ್ಲಾ ಕೆಲಸವನ್ನು ಮಾಡುವುದಾಗಿ ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರೆ. ಮುಂದಿನ ದಿನ ದೊಡ್ಡ ಮಟ್ಟದಲ್ಲಿ ಅಭಿನಂದನಾ ಕಾರ್ಯಕ್ರಮದಲ್ಲಿ ಎಚ್‌ಡಿಕೆ ಅವರನ್ನು ಸನ್ಮಾನ ಕಾರ್ಯಕ್ರಮ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೃಷ್ಣ ಅಯ್ಯಂಗರ್,ಸಂಪತ್ ಕುಮಾರ್, ಸತೀಶ್, ಸಿದ್ದೇಗೌಡ, ಮೋಹನ್ ಕೃಷ್ಣಮೂರ್ತಿ ಹಾಗೂ ನಿವಾಸಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net