ದೂರದೃಷ್ಟಿ ಇಟ್ಟುಕೊಂಡು ಶಾಶ್ವತ ಕೆಲಸ ಮಾಡುವೆ

26
Published on

ಮೈಸೂರು: ಚಾಮರಾಜ ಕ್ಷೇತ್ರದ ಅಭಿವೃದ್ಧಿಗೆ ಸ್ಪಷ್ಟ ಪರಿಕಲ್ಪನೆ ಹೊಂದಿದ್ದು, ದೂರದೃಷ್ಟಿ ಇಟ್ಟುಕೊಂಡು ಶಾಶ್ವತ ಕೆಲಸ ಮಾಡುತ್ತೇನೆ ಎಂದು ಶಾಸಕ ಕೆ.ಹರೀಶ್‌ಗೌಡ ಹೇಳಿದರು.

ಶ್ರೀ ಆದಿಶಕ್ತಿ ಬಂದತಮ್ಮ ಕಾಳಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಕುವೆಂಪುನಗರದ ಬಂದತಮ್ಮ ಕಾಳಮ್ಮ ಕಲ್ಯಾಣಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಕುಡಿಯುವ ನೀರು, ರಸ್ತೆ ಸೇರಿದಂತೆ ಇನ್ನಿತರ ಮೂಲಸೌಕರ್ಯಯೊಂದಿಗೆ ವಿವಿಧ ರೀತಿಯ ಅಭಿವೃದ್ಧಿ ಕೆಲಸ ಮಾಡಲು ಪ್ರಯತ್ನಿಸುವೆ. ಮುಂದಿನ ದಿನಗಳಲ್ಲಿ ಆಗಬೇಕಾದ ಕೆಲಸ ಕಾರ್ಯಗಳ ಕುರಿತು ಮುಖಂಡರೊಂದಿಗೆ ಚರ್ಚಿಸಿ ಸಲಹೆ ಪಡೆದುಕೊಳ್ಳುತ್ತೇನೆ ಎಂದರು.

ನಾನು ದುರಂಹಕಾರಿಯಲ್ಲ. ನನ್ನ ಹುಟ್ಟುಗುಣ, ಸ್ವಭಾವದಿಂದಾಗಿ ನಾನು ಮಾತನಾಡುವ ಶೈಲಿಯೇ ಹಾಗಿದೆ. ಅದಕ್ಕಾಗಿ ಯಾರೂ ನನ್ನನ್ನು ದುರಂಹಕಾರಿ ಎಂದು ಭಾವಿಸಬಾರದು. ಕೆ.ಜಿ.ಕೊಪ್ಪಲಿನ ಜನರು ಸ್ವಾಭಿಮಾನಿಗಳು. ಈ ಸ್ವಾಭಿಮಾನಕ್ಕೆ ಧಕ್ಕೆ ತರದಂತೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮನಾಥಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಸಿ.ಬಸವರಾಜು, ಉಪಾಧ್ಯಕ್ಷ ಮಹದೇವಪ್ಪ, ಕಾರ್ಯದರ್ಶಿ ಆರ್.ಲಿಂಗಪ್ಪ, ಸಹ ಕಾರ್ಯದರ್ಶಿ ಎಸ್.ಬಸವರಾಜ, ಖಜಾಂಚಿ ಎಲ್.ಚಂದ್ರು, ಪಾಲಿಕೆ ಸದಸ್ಯ ಶಿವಕುಮಾರ್ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net