ದೂರ ಶಿಕ್ಷಣದಲ್ಲಿ ಮುಕ್ತ ವಿವಿಯಲ್ಲಿ ಹಲವು ಅವಕಾಶ

1686390594342
Published on

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು 1996 ಪ್ರಾರಂಭವಾಗಿದ್ದು, ದೂರು ಶಿಕ್ಷಣ ನೀಡುವ ರಾಜ್ಯದ ಅಧಿಕೃತಿ ಏಕೈಕ ವಿಶ್ವವಿದ್ಯಾನಿಯವಾಗಿದೆ.

ಎ ಫ್ಲಸ್ ನ್ಯಾಕ್ ಮಾನ್ಯತೆ ಪಡೆದಿರುವ ಮುಕ್ತ ವಿವಿಯು, ಇದುವರೆಗೆ ಸುಮಾರು 63 ಕೋರ್ಸ್‌ಗಳನ್ನು ನಡೆಸುವ ಮೂಲಕ ದೂರು ಶಿಕ್ಷಣ ಭಯಸುತ್ತಿದ್ದ ವಿದ್ಯಾರ್ಥಿಗಳಿಗೆ ನೆರವಾಗಿತ್ತು. ಇದೀಗ ಪ್ರಸಕ್ತ ವರ್ಷದಿಂದ ಹಳೆಯ ಕೋರ್ಸ್‌ಗಳ ಜತೆಗೆ ಮತ್ತೆ 51 ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸುತ್ತಿದೆ. ಈ ಮೂಲಕ ಎಲ್ಲ ಕ್ಷೇತ್ರಗಳಲ್ಲಿ ಆದ್ಯತೆ ನೀಡುವ ಮೂಲಕ, ವಿದ್ಯಾರ್ಥಿಗಳ ಆಸಕ್ತಿದಾಯಕವಾಗಿ ಕೋರ್ಸ್‌ಗಳನ್ನು ಪ್ರಾರಂಭಿಸುತ್ತಿದೆ.

ದೂರ ಶಿಕ್ಷಣ ಭಯಸುವ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಪ್ರವೇಶಾತಿ ಪಡೆಯಬಹುದಾಗಿದೆ. ಇದರಿಂದ ರಾಜ್ಯದ ಯಾವುದೇ ಮೂಲೆಯಿಂದಲೂ ಪ್ರವೇಶ ಭಯಸುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಬಿ.ಎ, ಬಿ.ಕಾಂ., ಬಿಬಿಎ, ಬಿಸಿಎ, ಬಿಎಸ್ಸಿ(ಆನರ್ಸ್‌) ಮಾಹಿತಿ ವಿಜ್ಞಾನ, ಬಿಎಸ್ಸಿ(ಆನರ್ಸ್‌) ಗೃಹ ವಿಜ್ಞಾನ, ಬಿಇಡಿ, ಪತ್ರಿಕೋದ್ಯಮ, ಕಂಪ್ಯೂಟರ್ ಅಪ್ಲಿಕೇಷನ್, ಪೌಷ್ಠಿಕ ಮತ್ತು ಆರೋಗ್ಯ ಶಿಕ್ಷಣ, ಆರಂಭಿಕ ಶಿಶು ಆರೈಕೆ ಮತ್ತು ಶಿಕ್ಷಣ ಸೇರಿದಂತೆ ಸ್ನಾತಕ ಹಾಗೂ ಸ್ನಾತಕೋತ್ತರ ಅನೇಕ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು.

ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು ಭಾಷೆಗಳಲ್ಲಿ ಪಿಎಚ್‌ಡಿ, ಕೌಶಲ ಅಭಿವೃದ್ಧಿ ಕೋರ್ಸ್‌ಗಳು ಸೌಲಭ್ಯವಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರು ಬೋಧನಾ ಶುಲ್ಕದಲ್ಲಿ ಶೇ.15 ರಷ್ಟು ವಿನಾಯಿತಿ ಪಡೆಯಬಹುದು. ಆಟೋ, ಕ್ಯಾಬ್ ಚಾಲಕರು, ಅವರ ಪತ್ನಿ ಮತ್ತು ಮಕ್ಕಳ ಬೋಧನಾ ಶುಲ್ಕದಲ್ಲಿ ಶೇ.30ರಷ್ಟು ವಿನಾಯಿತಿ ಪಡೆಯಬಹುದು.

ತೃತೀಯ ಲಿಂಗಿಗಳು ಹಾಗೂ ಅಂಗವಿಲಕರು ಅಭ್ಯರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಮುಕ್ತ ವಿದ್ಯಾನಿಲಯ ಆರಂಭಿಸಿದೆ.
ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ವಿಜಯವಾಣಿ ಹಾಗೂ ದಿಗ್ವಿಜಯ ವಾಹಿನಿಯ ವತಿಯಿಂದ ಶನಿವಾರ ಮತ್ತು ಭಾನುವಾರ ಆಯೋಜಿಸಿರುವ ಎಜುಕೇಷನ್ ಎಕ್ಸ್‌ಪೋದಲ್ಲಿ ಮುಕ್ತ ವಿದ್ಯಾನಿಲಯವು ಸಂಪೂರ್ಣ ಮಾಹಿತಿಯನ್ನು ಆಸಕ್ತರಿಗೆ ದ್ವಿತೀಯ ದರ್ಜೆ ಸಹಾಯಕ ಅನಿಲ್‌ಕುಮಾರ್ ಅವರು ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net