ದುಷ್ಟರ ಸಂಹಾರ, ಸಜ್ಜನರ ರಕ್ಷಣೆ ಮಾಡುವುದೇ ನಾಡಹಬ್ಬ ದಸರಾ

23 ckm 3
ಚಿಕ್ಕಮಗಳೂರು ಹೊರವಲಯದ ಬೀಕನಹಳ್ಳಿ ಶ್ರೀ ಚಾಮುಂಡೇಶ್ವರಿ ಶ್ರೀಕ್ಷೇತ್ರದಲ್ಲಿ ಆರಂಭವಾದ ೭೪ನೇ ವರ್ಷದ ದಸರಾ ಮಹೋತ್ಸವವನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಉದ್ಘಾಟಿಸಿದರು. ಬಿ.ಜಿ.ಸೋಮಶೇಖರ್, ಎಚ್.ಸಿ.ಕಲ್ಮರುಡಪ್ಪ, ಬಿ.ಎಂ.ಯೋಗಾನAದ, ಎಚ್.ಪಿ.ಮಂಜೇಗೌಡ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ದುಷ್ಟರ ಸಂಹಾರ ಮಾಡಿ ಸಜ್ಜನರನ್ನು ರಕ್ಷಣೆ ಮಾಡುವ ಮಹಾ ತಾಯಿಯಾಗಿ ಚಾಮುಂಡಿ ದೇವಿಯನ್ನು ಪೂಜಿಸುವ ವಿಧಾನವೇ ನಾಡಹಬ್ಬ ದಸರಾ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತಿಳಿಸಿದರು.

ನಗರದ ಹೊರವಲಯದ ಬೀಕನಹಳ್ಳಿ ಶ್ರೀ ಚಾಮುಂಡೇಶ್ವರಿ ಶ್ರೀಕ್ಷೇತ್ರದಲ್ಲಿ ಆರಂಭವಾದ ೭೪ನೇ ವರ್ಷದ ದಸರಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ನಾಡಹಬ್ಬ ದಸರಾ ಜನರ ಮನ ಸೆಳೆಯಿತು. ಇದು ಹಿಂದುಗಳ ಹಬ್ಬವಾಗಿದ್ದು, ವಿಜಯನಗರ ಪಥನವಾದ ನಂತರ ಇದನ್ನು ವೈಭವವಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದರು.

ಮೈಸೂರಿನಲ್ಲಿ ನಾಡದೇವತೆಯಾಗಿ ಚಾಮುಂಡೇಶ್ವರಿಯನ್ನು ಆಚರಿಸುತ್ತೇವೆ. ಇದೊಂದು ಸಾಂಸ್ಕೃತಿಕ ಉತ್ಸವವಾಗದೆ ದೇವಿ ಆರಾಧನೆಯನ್ನು ಒಂದೊAದು ದಿನ ಒಂದೊAದು ರೀತಿಯಲ್ಲಿ ಮಾಡಿಕೊಂಡು ಬರಲಾಗುತ್ತಿದೆ ಎಂದು ವಿವರಿಸಿದರು.

ಇಂದು ರಾಕ್ಷಸರಿಲ್ಲ, ರಾಕ್ಷಸಿ ಮನಸ್ಥಿತಿಯ ಜನರಿದ್ದಾರೆ. ಮಲಗಿದ್ದ ಹಸುವಿನ ಕೆಚ್ಚಲು ಕೊಯ್ಯುತ್ತಾರೆ. ಎಲ್ಲಾ ದೇವತೆಗಳು ವಾಸಮಾಡುವುದೇ ಗೋವಿನಲ್ಲಿ ಎಂದು ಹಿಂದೂಗಳು ಭಾವಿಸಿz್ದÉÃವೆ. ಇಟ್ಟರೆ ಸಗಣಿಯಾದೆ, ತಟ್ಟಿದರೆ ಬೆರಣಿಯಾದೆ. ಸುಟ್ಟರೆ ನುಸುಳಿಗೆ ವಿಭೂತಿಯಾದೆ, ತಟ್ಟದೆ ಹಾಕಿದರೆ ಗೊಬ್ಬರವಾದೆ ಎಂಬAತೆ ಗೋವುಗಳನ್ನು ನಾವು ಪೂಜಿಸುತ್ತಿz್ದÉÃವೆ. ಈ ನಿಟ್ಟಿನಲ್ಲಿ ಇಂದಿನ ವಿಷಮ ಪರಿಸ್ಥಿತಿಯಲ್ಲಿ ಗಂಭೀರವಾಗಿ ಯೋಚಿಸುವ ಅಗತ್ಯ ಇದೆ ಎಂದು ಹೇಳಿದರು.

ರಾಜಕಾರಣ ಕೇವಲ ಅಧಿಕಾರ ಬಳಕೆಗೆ ಸೀಮಿತವಾಗದೆ ಅಧಿಕಾರ ಗಳಿಕೆಯಾಗಿ ಅಭಿವೃದ್ಧಿಗೂ ಬಳಕೆಯಾಗಬೇಕು. ಸಮಾಜ ಮತ್ತು ದೇಶವನ್ನು ಬಲಗೊಳಿಸಲು ಉಪಯೋಗವಾಗಬೇಕು. ಜಾತಿಗಣತಿ ಹೆಸರಿನಲ್ಲಿ ಹಿಂದೂಗಳನ್ನು ಒಡೆಯುವ ಕೆಲಸಗಳಾಗಬಾರದು. ವಿವಿಧತೆ ಇದೆ, ಅದಕ್ಕೆ ತಕ್ಕ ಸೂತ್ರವೂ ಇದೆ. ದೇವನೊಬ್ಬ ನಾಮ ಹಲವು ಎಂದು ಭಾವಿಸುತ್ತೇವೆ. ಹಲವು ಹೆಸರಿನಲ್ಲಿ ದೇವತೆಯನ್ನು ತಾಯಿ ಚಾಮುಂಡೇಶ್ವರಿ ಒಬ್ಬಳೇ ಎಂದು ಪೂಜಿಸುತ್ತೇವೆ ಎಂದರು.

ಭಿನ್ನತೆ ಇದೆ. ಅಂದರೆ ಏಕತೆಯ ಸೂತ್ರವೂ ಇದ್ದು, ಈ ಏಕತೆಗೆ ಧಕ್ಕೆ ತರುವಂತಹ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಸಮಸ್ತ ಹಿಂದೂಗಳ ಭಕ್ತಿಯ ಸ್ಥಳ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಬಗ್ಗೆ ಅಪಕೀರ್ತಿ, ಅಪನಂಬಿಕೆ ಮೂಡಿಸುತ್ತಿರುವುದು ಭಕ್ತಿಗೆ ಭಂಗ ತರುವ ಷಡ್ಯಂತ್ರ ಎಂದು ಖಂಡಿಸಿದರು.

ಜಿಪA ಮಾಜಿ ಉಪಾಧ್ಯಕ್ಷ ಬಿ.ಜಿ ಸೋಮಶೇಖರ್ ಮಾತನಾಡಿ, ನಾಲ್ಕುನೂರು ವರ್ಷಗಳ ಪರಂಪರೆ, ಇತಿಹಾಸ ಇರುವ ನಾಡಹಬ್ಬ ದಸರಾ ಮಹೋತ್ಸವ ಮೈಸೂರಿನಲ್ಲಿ ವಿಜೃಂಭಣೆಯಿAದ ನಡೆಯುತ್ತಿದೆ. ಅದರ ಭಾಗವಾಗಿ ಬೀಕನಹಳ್ಳಿ ಸುಕ್ಷೇತ್ರ ಚಾಮುಂಡೇಶ್ವರಿ ಸನ್ನಿದಾನದಲ್ಲಿ ದಸರಾ ನಡೆಯುತ್ತಿದೆ. ದುಷ್ಟರ ಸಂಹಾರ, ಶಿಷ್ಟರ ರಕ್ಷಣೆ ಇದರ ಉz್ದÉÃಶ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ರೈತ ಮೊರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ ಕಲ್ಮುರಡಪ್ಪ, ಶ್ರೀಚಾಮುಂಡೇಶ್ವರಿ ಸುಕ್ಷೇತ್ರದ ಅಧ್ಯಕ್ಷ ಬಿ.ಪಿ ನಂಜಪ್ಪ, ಉಪಾಧ್ಯಕ್ಷ ಎಚ್.ಗುರುಬಸಪ್ಪ, ಕಾರ್ಯದರ್ಶಿ ಬಿ.ಎಂ.ಯೋಗಾನAದ್, ಖಜಾಂಚಿ ಬಿ.ಎಚ್.ಸೋಮೇಗೌಡ, ಸದಸ್ಯರಾದ ಬಿ.ಎಚ್.ನಂಜುAಡಪ್ಪ, ಬಿ.ಸಿ.ಗುರುಸಿದ್ದಪ್ಪ, ಬಿ.ವಿ.ಯತಿರಾಜ್, ಎಂ.ಲೋಕನಾಥ್, ಶ್ರೀರಂಗಪ್ಪ, ಎಚ್.ಪಿ.ಮಂಜೇಗೌಡ, ಬಿ.ಎಂ.ನಾಗರಾಜ್, ಬಿ.ಎಸ್.ಪರಮೇಶ್ವರಪ್ಪ, ಬಿ.ಎಚ್.ವಿಜಯಕುಮಾರ್, ಚಂದ್ರಚಾರ್, ಎಸ್.ಎನ್ ಲಲಿತಾ ಬಸವರಾಜ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net