ದುಷ್ಕರ್ಮಿಗಳಿಂದ ಟೊಮ್ಯಾಟೊ ಬೆಳೆ ನಾಶ

11 mlv 2
Published on

ಮಳವಳ್ಳಿ: ತಾಲೂಕಿನ ಚನ್ನಪಿಳ್ಳೇಕೊಪ್ಪಲು ಗ್ರಾಮದ ರೈತ ಬೆಳೆದಿದ್ದ ಟೊಮ್ಯಾಟೊ ಗಿಡಗಳಿಗೆ ಕಿಡಿಗೇಡಿಗಳು ಗುರುವಾರ ರಾತ್ರಿ ಕಳೆನಾಶಕ ಸಿಂಪಡಿಸಿ ನಾಶ ಮಾಡಿದ್ದಾರೆ.


ಗ್ರಾಮದ ಲೋಕೇಶ್ ಎಂಬುವರು ಸುಮಾರು 20 ಗುಂಟೆ ಜಮೀನಿನಲ್ಲಿ 3 ಸಾವಿರಕ್ಕೂ ಹೆಚ್ಚು ಟೊಮ್ಯಾಟೊ ಸಸಿಗಳನ್ನು ಬೆಳೆಸಿದ್ದು, ಇಳುವರಿ ಉತ್ತಮವಾಗಿ ಫಲ ಕಚ್ಚಿತ್ತು. ಕೆಲವೇ ದಿನಗಳಲ್ಲಿ ಮೊದಲ ಕಟಾವು ಮಾಡಬೇಕಿದ್ದ ಬೆಳೆಗೆ ಗುರುವಾರ ರಾತ್ರಿ ಕಿಡಿಗೇಡಿಗಳು ಕಳೆನಾಶಕ ಔಷಧ ಸಿಂಪಡಿಸಿ ಪರಾರಿಯಾಗಿದ್ದಾರೆ. ದುಷ್ಟರು ಮಾಡಿದ ಈ ದುಷ್ಕೃತ್ಯದಿಂದ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ರೈತ ಲೋಕೇಶ್ ಅಳಲು ತೋಡಿಕೊಂಡಿದ್ದಾರೆ. ಈ ಸಂಬಂಧ ಅವರು ಕಿರುಗಾವಲು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net