ದುಷ್ಕರ್ಮಿಗಳಿಂದ ಜೋಳದ ಫಸಲು ನಾಶ

FEB 18-HRP-02,,
Published on

ಹರಪನಹಳ್ಳಿ: ಕುಂಚೂರು ಗ್ರಾಮದಲ್ಲಿ ಬಾಣದ ಬಸವರಾಜ್ ಅವರ ಎರಡೂವರೆ ಎಕರೆ ಪೈಕಿ ಒಂದೂವರೆ ಎಕರೆ ಪ್ರದೇಶದಲ್ಲಿನ ಜೋಳದ ಫಸಲನ್ನು ನಾಶಪಡಿಸಲಾಗಿದೆ.

ಒಂದೂವರೆ ತಿಂಗಳಿನಲ್ಲಿ ಫಸಲು ಕೊಯ್ಲು ಮಾಡಬೇಕಿತ್ತು. ಆದರೆ, ಕಳೆದ ಎರಡು ದಿನಗಳ ಹಿಂದೆ ರಾತ್ರಿ ದುಷ್ಕರ್ಮಿಗಳು ಫಸಲನ್ನು ನೆಲಕ್ಕೆ ಉರುಳಿಸಿದ್ದಾರೆ. ಅಧಿಕಾರಿಗಳು ಫಸಲು ಪರಿಶೀಲಿಸಿ ಪರಿಹಾರ ಒದಗಿಸಬೇಕೆಂದು ಬಾಣದ ಬಸವರಾಜ್ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net