ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

Demand action against the perpetrators
ಮುದ್ದೇಬಿಹಾಳ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಪದಾಧಿಕಾರಿಗಳು ಶಿರಸ್ತೇದಾರ ಎ.ಬಿ. ಬಾಗೇವಾಡಿ ಅವರಿಗೆ ಮನವಿ ಸಲ್ಲಿಸಿದರು. ಪಿ.ಬಿ. ಮಾತಿನ, ಕೆ.ಎಂ. ರಿಸಾಲ್ದಾರ, ಮುತ್ತು ಕನ್ನೂರ, ಅನೀಲ ವಾಲೀಕಾರ ಇತರರಿದ್ದರು.
Published on

ಮುದ್ದೇಬಿಹಾಳ: ಬೀಳಗಿ ತಾಲೂಕು ಇಂಗಳಗಿ ಗ್ರಾಮದ ರೈತ ಹೋರಾಟಗಾರ ಯಲ್ಲಪ್ಪ ಹೆಗಡೆ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಬುಧವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ವತಿಯಿಂದ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.

ವಕೀಲ ಪಿ.ಬಿ. ಮಾತಿನ ಮಾತನಾಡಿ, ರಾಜ್ಯದಲ್ಲಿ ಹೋರಾಟಗಾರರ ಮೇಲೆ ಪ್ರತಿನಿತ್ಯ ಇಂತಹ ಘಟನೆಗಳು ನಡೆದು, ಕಾನೂನು ಸುವ್ಯವಸ್ಥೆ ಹದಗೆಡುತ್ತದೆ. ಆದರೂ ರಾಜ್ಯ ಸರ್ಕಾರ ಮಾತ್ರ ಕೈಕಟ್ಟಿ ಕೂತಿದೆ ಎಂದು ಆರೋಪಿಸಿದರು.

ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಮುರುಗೇಶ ನಿರಾಣಿ ಅವರ ವಿರುದ್ಧ ಭಿಕ್ಷಾಟನೆ ಮಾಡಿ ಹಣ ಸಂಗ್ರಹಿಸುವ ಹೋರಾಟಕ್ಕೆ ತೆರಳುವ ವೇಳೆ ದುಷ್ಕರ್ಮಿಗಳು ಯಲ್ಲಪ್ಪ ಹೆಗಡೆ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಇದು ಹೋರಾಟಗಾರರನ್ನು ಹತ್ತಿಕ್ಕುವ ಹುನ್ನಾರವಾಗಿದೆ ಎಂದು ದೂರಿದರು.

ಹೋರಾಟಗಾರ ಹೆಗಡೆ ಮೇಲೆ ಯಾರೇ ಹಲ್ಲೆ ಮಾಡಿದ್ದರೂ ಅಂಥವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ನಂತರ ಶಿರಸ್ತೇದಾರ ಎ.ಬಿ. ಬಾಗೇವಾಡಿ ಅವರಿಗೆ ಮನವಿ ಸಲ್ಲಿಸಲಾಯಿತು. ಮುಖಂಡ ಕೆ.ಎಂ. ರಿಸಾಲ್ದಾರ, ಮುತ್ತು ಕನ್ನೂರ, ಅನೀಲ ವಾಲೀಕಾರ, ಮುತ್ತು ಟಕ್ಕಳಕಿ, ಪರಶುರಾಮ ಮೂಲಿ, ಚನ್ನಬಸಪ್ಪ ಜೂಡಿ, ವಿಠ್ಠಲ ಬೈಲಗೊಂಡ, ದೇವಪ್ಪ ವಾಲೀಕಾರ, ಶಶಿಕುಮಾರ ವಾಲೀಕಾರ, ಮುತ್ತು ಬಿರಾದಾರ, ಅಬ್ದುಲ್ ಡೋಣುರ, ಸಂಗಣ್ಣ ಬಿರಾದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net