ದುಶ್ಚಟಮುಕ್ತ ಜೀವನದ ಸಂಕಲ್ಪ ಮಾಡಿ

03 KAMPLI 05
Published on

ಕಂಪ್ಲಿ: ಪಟ್ಟಣದಲ್ಲಿ ಚಪ್ಪರದಳ್ಳಿ ಸ್ವಸಹಾಯ ಸಂಘದ ಸಹಯೋಗದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನಿಂದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಗುರುವಾರ ನಡೆಯಿತು.

ಟ್ರಸ್ಟ್ ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಮಾತನಾಡಿ, ದುಶ್ಚಟಮುಕ್ತ ಸಮಾಜ ರೂಪಿಸಲು ಟ್ರಸ್ಟ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಯುವಜನತೆ ದುಶ್ಚಟಮುಕ್ತ ಜೀವನ ಸಾಗಿಸುವ ಸಂಕಲ್ಪ ಹೊಂದಬೇಕು ಎಂದರು. ಸಂಪನ್ಮೂಲ ವ್ಯಕ್ತಿ ಎಸ್.ರಾಮು ಮಾತನಾಡಿ, ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ, ಮನೆಯಲ್ಲಿ ಚಿಕ್ಕಮಕ್ಕಳ ಮನಸ್ಸಿನ ಮೇಲೆ ದುಷ್ಪಾರಿಣಾಮವಾಗುತ್ತದೆ ಎಂದರು.

ಕೃಷಿ ಅಧಿಕಾರಿ ಸಂಜುಕುಮಾರ್, ಒಕ್ಕೂಟದ ಪದಾಧಿಕಾರಿಗಳಾದ ರಾಜೇಶ್ವರಿ, ರೇಣುಕಾ, ಮುನ್ನಮ್ಮ, ಮೈಮುನಾಬೇಗಂ, ವಲಯ ಮೇಲ್ವಿಚಾರಕ ಮಂಜಣ್ಣ, ಸೇವಾಪ್ರತಿನಿಧಿಗಳಾದ ರೂಪಾ, ಹಸೀನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net