ದುಶ್ಚಟದಿಂದ ಮಾರಣಾಂತಿಕ ಕಾಯಿಲೆಗೆ ಆಹ್ವಾನ

0102
Published on

ಬೆಳಗಾವಿ: ಬಾಯಿ ಆರೋಗ್ಯ ದೇಹದ ಆರೋಗ್ಯದ ಕೇಂದ್ರಬಿಂದು. ಸರಿಯಾದ ಕ್ರಮದಲ್ಲಿ ಆಹಾರ ಸೇವಿಸಿ ಬಾಯಿ ಸ್ವಚ್ಛತೆ ಕಾಪಾಡಿದಲ್ಲಿ ದೇಹದ ಆರೋಗ್ಯ ಸದಾ ಚೆನ್ನಾಗಿರುತ್ತದೆ ಎಂದು ಪ್ರಾಚಾಯೆರ್ ಡಾ.ಅಲ್ಕಾ ಕಾಳೆ ಹೇಳಿದರು.

ಕೆಎಲ್​ಇ ವಿಶ್ವವಿದ್ಯಾಲಯದ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ ವಸಡು ರೋಗಶಾಸ ವಿಭಾಗದಿಂದ ವಿದ್ಯಾಲಯದ ವಸಡು ರೋಗ ವಿಭಾಗದಲ್ಲಿ ಇತ್ತೀಚೆಗೆ "ವಿಶ್ವ ಬಾಯಿ ಆರೋಗ್ಯ ದಿನ, ಕೆ.ಎಲ್​.ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹಾಗೂ ಭಾರತೀಯ ವಸಡು ರೋಗ ಶಾಸ ಸಂಸ್ಥಾಪಕ ಡಾ.ಶಂಕವಾಲ್ಕರ್​ ಜನದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರೋಗ್ಯವೇ ಭಾಗ್ಯ ಆದ್ದರಿಂದ ಬಾಯಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ. ಬಹಳಷ್ಟು ಜನತೆ ದುಶ್ಚಟಗಳಿಗೆ ಮಾರುಹೋಗಿ ಮಾರಣಾಂತಿಕ ರೋಗಗಳಿಗೆ ಆಹ್ವಾನ ನೀಡಿ ಜೀವ ಕಳೆದುಕೊಳ್ಳುತ್ತಿದಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಸಾರ್ವಜನಿಕರಿಗೆ ಬಾಯಿ ಆರೋಗ್ಯದ ಜಾಗೃತಿ ಮೋಡಿಸುವ ಸಲುವಾಗಿ ಆಗಸ್ಟ್​ ತಿಂಗಳು ಪೂರ್ಣ ಸಾರ್ವಜನಿಕರಿಗೆ ಉಚಿತವಾಗಿ ಬಾಯಿ ಸ್ವಚ್ಛತೆ ಚಿಕಿತ್ಸೆ ನೀಡಲಾಗುವುದು.

ಸಾರ್ವಜನಿಕರು ಸದುಪಯೋಗಪಡೆದುಕೊಳ್ಳಬೇಕು ಎಂದು ಡಾ.ಅಲ್ಕಾ ಕಾಳೆ ತಿಳಿಸಿದರು. ವಿಭಾಗದ ಮುಖ್ಯಸ್ಥ ಡಾ.ವಿನಯ ಕುಂಬೋಜಕರ್​ ಮಾತನಾಡಿದರು. ಡಾ.ಸೋನಾಲ್​ ಜೋಷಿ, ವಿನಯ ಕುಂಬೋಜಕರ್​, ಡಾ.ಶೈಲಾ ಕೋಠಿವಾಲೆ, ಡಾ.ಅಂಜನ ಬಾಗೇವಾಡಿ, ರೇಣುಕಾ ಮೆಟಗುಡ್ಡ, ಡಾ.ಶ್ವೇತಾ ಹೂಗಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net