

ನಂದಗುಡಿ: ಮಾದಕ ವಸ್ತುಗಳ ಬಳಕೆಯಿಂದ ಭವಿಷ್ಯ ಹಾಳಾಗುವುದಲ್ಲದೆ ಸಮಾಜದ ಸ್ವಾಸ್ಥ್ಯವೂ ಕೆಡುತ್ತದೆ ಎಂದು ಹೊಸಕೋಟೆ ಪ್ರೆಸ್ ಕ್ಲಬ್ ಕಾರ್ಯದರ್ಶಿ ನಟರಾಜ್ ಎಂಎನ್‌ಆರ್ ಹೇಳಿದರು. ನಂದಗುಡಿಯ ಕೆಪಿಎಸ್ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾದಕ ವ್ಯಸನಗಳ ದುಷ್ಪರಿಣಾಮಗಳ ಅರಿವಿಗಾಗಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತ ಇಡೀ ವಿಶ್ವದಲ್ಲೇ ಹೆಚ್ಚು ಯುವಕರನ್ನು ಹೊಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ದುಶ್ಚಟಗಳಿಗೆ ದಾಸರಾಗುತ್ತಿರುವುದು ಆತಂಕಕಾರಿ ವಿಷಯ. ದುಶ್ಚಟಮುಕ್ತ ದೇಶ ಆರೋಗ್ಯವಂತ ಸಮಾಜ ನಿರ್ಮಾಣದ ಮಹಾತ್ಮ ಗಾಂಧೀಜಿಯವರ ಕನಸು. ಆ ಕನಸು ನನಸು ಮಾಡುವ ನಿಟ್ಟಿನಲ್ಲಿ ವ್ಯಸನ ಮುಕ್ತ ಸಮಾಜಕ್ಕೆ ಅರಿವು ಕಾರ್ಯಕ್ರಮಗಳು ಅತಿ ಮುಖ್ಯವಾಗಿವೆ ಎಂದರು. ನಂದಗುಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಸನ್ನ ಮಾತನಾಡಿ, ಬೀಡಿ ಸಿಗರೇಟು, ಗುಟ್ಕಾ, ಗಾಂಜಾ, ಆಫೀಮು, ಮದ್ಯ ಸೇರಿ ಇನ್ನಿತರ ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಲಿದೆ ಎಂದರು. ಶಾಲಾ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗಂಗಾಧರ, ಉಪ ಪ್ರಾಂಶುಪಾಲೆ ಶುಭಾ, ವಲಯ ಮೇಲ್ವಿಚಾರಕ ಯೋಗೇಶ್ ಇತರರು ಇದ್ದರು.
ಯಾವುದೇ ಒಂದು ದೇಶ ನಾಶ ಮತ್ತು ಆರ್ಥಿಕವಾಗಿ ದುರ್ಬಲವಾಗಬೇಕಾದರೆ ಯಾವುದೇ ಪ್ರಬಲ ಅಣುಬಾಂಬ್ ಅಥವಾ ಶಸ್ತ್ರಾಸ್ತ್ರಗಳು ಬೇಕಿಲ.್ಲ ಕೇವಲ ಮಾದಕ ವಸ್ತುಗಳ ಚಟಕ್ಕೆ ಬಿದ್ದರೆ ಸಾಕು ಅದು ಅಷ್ಟೊಂದು ಮಾರಕವಾಗಿವೆ. ಹರೀಶ್‌ಕುಮಾರ್ ಗ್ರಾಮಾಭಿವೃದ್ದಿ ಯೋಜನೆ, ತಾಲೂಕು ಯೋಜನಾಧಿಕಾರಿ