

ಹುಮನಾಬಾದ್: ಪ್ರತಿಯೊಬ್ಬರೂ ದುಶ್ಚಟಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸಾರ್ಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಗ್ರಾಪಂ ಅಧ್ಯಕ್ಷೆ ಗೋಪೆಮ್ಮ ಮಾರುತಿ ಶಿಲ್ಪಿ ಹೇಳಿದರು.
ಜಲಸಂಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪೈಪ್‌ಲೈನ್ ಇನ್ಪ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿಯಿಂದ ಶ್ರುಕ್ರವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಕಂಪನಿಯವರು ಜನಪರ ಕಾಳಜಿಯೊಂದಿಗೆ ಗ್ರಾಮದಲ್ಲಿ ಶಿಬಿರ ಆಯೋಜಿಸಿವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಂಪನಿಯ ಮುಖ್ಯಸ್ಥರಾದ ಮುಂಬೈನ ಮಹೇಶ ಐಯ್ಯರ್, ಅಂಕುರ ಮಲಿಕ್ ಮಾತನಾಡಿ, ಎಲ್ಲರೂ ಶಿಬಿರದ ಸದ್ಬಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.
ಏರಿಯಾ ಮ್ಯಾನೇಜರ್ ದುರ್ಗಾ ಪ್ರಸಾದ ಪ್ರಾಸ್ತಾವಿಕ ಮಾತನಾಡಿ, ಆರೋಗ್ಯ ಶಿಬಿರಗಳಿಂದ ಬಡರಿಗೆ ಅನುಕೂಲವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗಿದೆ ಎಂದರು.
ಪಿಡಿಒ ರಘುನಾಥ, ಮುಖ್ಯಗುರು ಕರಬಸಪ್ಪ ಮೇತ್ರೆ, ವೈದ್ಯಾರಾದ ಅನಿತಾ ಪೀಟರ್, ಅನಿಲ ಸಿಂಘಾಲ್ ಇತರರಿದ್ದರು. ಮಂಜು ಪಟೇಲ್ ಸ್ವಾಗತಿಸಿದರು. ಶಿಬಿರದಲ್ಲಿ ಸುಮಾರು ೭೫೦ ಜನರ ಆರೋಗ್ಯ ತಪಾಸಣೆ ನಡೆಸಲಾಯಿತು.