ದುಶ್ಚಟದಿಂದ ದೂರವಿದ್ದರೆ ಬದುಕು ಸುಂದರ

CTD SJM-BASAVAKUMARA SWAMIJI--
Published on

ಚಿತ್ರದುರ್ಗ: ಯುವಜನರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅದರಿಂದ ದೂರವಿದ್ದು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.

ನಗರದ ಎಸ್‌ಜೆಎಂ ಪದವಿ ಕಾಲೇಜಿನಲ್ಲಿ ಶನಿವಾರ ನಡೆದ ಪ್ರಸಕ್ತ ಸಾಲಿನ ಕ್ರೀಡಾ, ಸಾಂಸ್ಕೃತಿಕ, ರಾಷ್ಟ್ರೀಯ ಸೇವಾ ಯೋಜನೆ, ಎನ್‌ಸಿಸಿ ಮತ್ತು ವಿವಿಧ ಕೋಶಗಳ ಚಟುವಟಿಕೆಗಳ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.

ಮೊಬೈಲ್, ಸಾಮಾಜಿಕ ಜಾಲತಾಣಗಳ ದುರ್ಬಳಕೆ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳು ಯಾಂತ್ರಿಕ ಜೀವನ ಸಾಗಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ದಾವಣಗೆರೆ ವಿವಿ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಕೆ.ಬಿ. ರಂಗಪ್ಪ ಮಾತನಾಡಿ, ಪದವಿಯೊಂದಿಗೆ ವಿವಿಧ ಕೌಶಲಗಳನ್ನು ರೂಢಿಸಿಕೊಂಡರೆ ಉದ್ಯೋಗ ಗಳಿಕೆಗೆ ನೆರವಾಗಲಿದೆ ಎಂದರು. ಕಾಲೇಜಿನ ಪ್ರಾಚಾರ‌್ಯ ಡಾ.ಎಸ್.ಎಚ್. ಪಂಚಾಕ್ಷರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪಿಎಚ್.ಡಿ ಪದವಿ ಪಡೆದ ಸಮಾಜಶಾಸ್ತ್ರ ಪ್ರಾಧ್ಯಾಪಕ ಪ್ರೊ.ಎಸ್. ಆನಂದ್, ಅಂತಿಮ ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಲೀಲಾ ಮತ್ತು ಉಜ್ಮಾಮರಿಯಂ(ಬಿಎ), ವಿ. ತೇಜಸ್ವಿನಿ(ಬಿಎಸ್ಸಿ), ಟಿ.ಮಹಾಲಕ್ಷ್ಮೀ (ಬಿ.ಕಾಂ), ಎನ್‌ಸಿಸಿ ವಿದ್ಯಾರ್ಥಿನಿ ಆರ್.ಭಾವನಾ ಅವರನ್ನು ಸನ್ಮಾನಿಸಲಾಯಿತು.

ಐಕ್ಯುಎಸಿ ಸಂಚಾಲಕ ಡಾ.ಎ.ಹರ್ಷವರ್ಧನ್, ಪ್ರಾಧ್ಯಾಪಕರಾದ ಡಾ.ಬಿ. ರೇವಣ್ಣ, ಪ್ರೊ.ಸಿ.ತಿಪ್ಪೇಸ್ವಾಮಿ, ಪ್ರೊ.ಟಿ.ರಜಪೂತ್, ಪ್ರೊ. ಸಿ.ಎನ್.ವೆಂಕಟೇಶ್, ಪ್ರೊ.ಬಿ.ಎಂ.ಸ್ವಾಮಿ, ಡಾ. ಎಸ್.ನಾಜೀರುನ್ನೀಸಾ, ಪ್ರೊ.ಸಿ.ರಮೇಶ್, ಹೀನಾಕೌಸರ್, ಮಾಧುರಿ, ಪ್ರೊ.ಲಕ್ಷ್ಮೀಕಾಂತ್, ಎಂ.ಇ.ಮಧು, ಮೋಹನ್, ಡಾ.ಸತೀಶ್ ನಾಯ್ಕ, ಪ್ರೊ.ಎಚ್.ಎಂ. ಮಂಜುನಾಥ ಸ್ವಾಮಿ, ಅಧೀಕ್ಷಕ ಶ್ರೀನಿವಾಸ ಮೂರ್ತಿ ಮತ್ತಿತರರು ಇದ್ದರು.

ಚಿನ್ಮಯಿ ಭರತನಾಟ್ಯ ಪ್ರದರ್ಶಿಸಿದರು. ದಿವ್ಯಾ ಪ್ರಾರ್ಥಿಸಿದರು. ಡಾ.ಬಿ.ರೇವಣ್ಣ ವಂದಿಸಿದರು. ಸ್ನೇಹಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net