ದುಶ್ಚಟದಿಂದ ದೂರ ಉಳಿದರೆ ಬದುಕು ಸುಂದರ

Chambol photo-1
Published on

ಬೀದರ್: ಮನುಷ್ಯರು ದುಶ್ಚಟಗಳಿಂದ ದೂರ ಉಳಿದರೆ ಬದುಕು ಸುಂದರವಾಗುತ್ತದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ನುಡಿದರು.
ಬೀದರ್ ತಾಲ್ಲೂಕಿನ ಚಾಂಬೋಳ್ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ರುದ್ರಮುನಿ ಪಟ್ಟದ್ದೇವರು ವಿದ್ಯಾ ಸಂಸ್ಥೆ ಸಂಚಾಲಿತ ವೀರಭದ್ರೇಶ್ವರ ಪ್ರೌಢಶಾಲೆ ಹಾಗೂ ಶ್ರೀಮತಿ ನೀಲಮ್ಮ ತಾಯಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಸಂಯಮ ಪ್ರಶಸ್ತಿ ಭಾಜನರಾದ ಪ್ರಯುಕ್ತ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಚಾಂಬೋಳ್ ಹಾಗೂ ಭಾಲ್ಕಿ ಮಠಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ರುದ್ರಮುನಿ ಪಟ್ಟದ್ದೇವರು ಮಠಾಧೀಶರಿಗೆ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು.
ಗುರುಬಸವ ಪಟ್ಟದ್ದೇವರು ಕಿರಿಯ ವಯಸ್ಸಿನಲ್ಲೇ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಿರುವುದು ಪ್ರಶಂಸನೀಯ ಎಂದು ಸಾನಿಧ್ಯ ವಹಿಸಿದ್ದ ರುದ್ರಮುನಿ ಪಟ್ಟದ್ದೇವರು ಹೇಳಿದರು.
ಶಾಸಕ ರಹೀಂಖಾನ್ ಕಾರ್ಯಕ್ರಮ ಉದ್ಘಾಟಿಸಿದರು. ಚನ್ನಬಸಪ್ಪ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಡಾ. ಅಮರನಾಥ ಸೋಲಪುರೆ, ಶ್ರೀ ರುದ್ರಮುನಿ ಪಟ್ಟದ್ದೇವರು ವಿದ್ಯಾ ಸಂಸ್ಥೆಯ ನಿರ್ದೇಶಕರಾದ ಪ್ರಕಾಶ ಕುಲಕರ್ಣಿ, ಶರಣಪ್ಪ ಪಾಟೀಲ, ವಿಶ್ವನಾಥ ಪಾಟೀಲ, ಗಂಗಮ್ಮ ಕತ್ತೆ, ಡಾ. ಮಾರುತಿ ಜ್ಯಾಂತೆ, ಗಣಪತರಾವ್ ಬಿರಾದಾರ, ವಿದ್ಯಾವತಿ ಪಾಟೀಲ, ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು. ಮಕ್ಕಳಿಂದ ನಡೆದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಗ್ರಾಮದ ನೂರಾರು ಜನ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net