ದುಶ್ಚಟಗಳಿಗೆ ದಾಸರಾದರೆ ಭವಿಷ್ಯ ಹಾಳು

Nasha
Published on

ಚಿತ್ರದುರ್ಗ: ಯುವಸಮೂಹ ದುಶ್ಚಟಗಳಿಗೆ ದಾಸರಾದರೆ, ಭವಿಷ್ಯ ಹಾಳಾಗಲಿದೆ. ಇದಕ್ಕೆ ಅವಕಾಶ ಕೊಡಬೇಡಿ ಎಂದು ಡಿವೈಎಸ್ಪಿ ದಿನಕರ್ ಸಲಹೆ ನೀಡಿದರು.

ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ವಿದ್ಯಾರ್ಥಿನಿಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾದಕ ವಸ್ತು ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಮಾದಕ ವಸ್ತುಗಳಿಗೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹೆಚ್ಚು ಆಕರ್ಷಿತರಾಗುವುದು ಸಹಜ. ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಅವುಗಳಿಂದ ದೂರವಿರಿ ಎಂದು ಕಿವಿಮಾತು ಹೇಳಿದರು.

ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ಜಿಲ್ಲೆಯನ್ನು ನಶೆ ಮುಕ್ತವಾಗಿಸಿ. ಎಲ್ಲಾದರೂ ಮಾದಕ ವಸ್ತುಗಳ ಸೇವನೆ ಕಂಡುಬಂದಲ್ಲಿ ಕಾನೂನಿನಡಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಮಾದಕ ವಸ್ತು ನಿರ್ಮೂಲನಾ ಕೇಂದ್ರದ ಡಾ. ಶಿವಣ್ಣ, ಬಡಾವಣೆ ಠಾಣೆ ಪಿಐ ತಿಮ್ಮಣ್ಣ, ಎಸ್‌ಐ ರಘು, ವಾರ್ಡನ್ ಸನತ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net