ದುಶ್ಚಟಗಳಿಂದ ಯುವಜನತೆ ದೂರವಿರಲಿ

12-DVD-5
ದೇವದುರ್ಗದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ವಸ್ಥೃ ಸಂಕಲ್ಪ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಪ್ರಾಚಾರ್ಯ ಟಿ.ಶಿವಕುಮಾರ, ಯೋಜನಾಧಿಕಾರಿ ರಾಜೇಶ ಎಂ.ಕಾನರ್ಪ, ಕಾಲೇಜು ಆಡಳಿತಾಧಿಕಾರಿ ಪ್ರಕಾಶ, ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕ ಯಲ್ಲಪ್ಪ, ಸಿವಿಲ್ ವಿಭಾಗ ಪ್ರಾಧ್ಯಾಪಕ ಮಧು ಇತರರಿದ್ದರು.
Published on

ದೇವದುರ್ಗ: ಯುವಜನತೆ ಓದುವ ಸಮಯದಲ್ಲಿ ದುಶ್ಚಟಗಳಿಗೆ ದಾಸರಾಗದೆ ಮಹನೀಯರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರಾಚಾರ್ಯ ಟಿ.ಶಿವಕುಮಾರ ಹೇಳಿದರು.

ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಆಯೋಜಿಸಿದ್ದ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಮದ್ಯಪಾನ, ಧೂಮಪಾನದಂತೆ ಮೊಬೈಲ್ ಗೀಳು ಕೂಡ ಚಟವಾಗಿ ಯುವಕರನ್ನು ಕಾಡುತ್ತಿದೆ.

ಅಕ್ಷರಜ್ಞಾನ, ಸಂಪರ್ಕಕ್ಕಾಗಿ ಮಾತ್ರ ಮೊಬೈಲ್ ಬಳಸಬೇಕು, ಮನೋರಂಜನೆಗಾಗಿ ಅಲ್ಲ. ವಿದ್ಯಾರ್ಥಿ ದೆಸೆಯಿಂದಲೇ ಆದರ್ಶ ಗುಣಗಳನ್ನು ಅಳವಡಿಸಿಕೊಂಡು ಉನ್ನತ ಸಾಧನೆ ಮಾಡಬೇಕು. ಸಮಯ ಪಾಲನೆ, ನಿರಂತರ ಪರಿಶ್ರಮ, ಕಠಿಣ ಅಭ್ಯಾಸದಿಂದ ಯಾವ ಕೆಲಸವೂ ಕಷ್ಟವಲ್ಲ.

ಸಿನಿಮಾ, ಮೊಬೈಲ್, ಜಾಲತಾಣದ ಹಿಂದೆ ಬೀಳದೆ ಪುಸ್ತಕದ ಹಿಂದೆ ಬಿದ್ದು ಅಧ್ಯಯನ ಮಾಡಬೇಕು. ಯುವಕರು ಸಮಾಜದ ಸಂಪತ್ತು. ಹಾಳಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದರು.

ಯೋಜನಾಧಿಕಾರಿ ರಾಜೇಶ ಎಂ.ಕಾನರ್ಪ, ಕಾಲೇಜು ಆಡಳಿತಾಧಿಕಾರಿ ಪ್ರಕಾಶ, ಮೆಕಾನಿಕಲ್ ವಿಭಾಗದ ಪ್ರಾಧ್ಯಾಪಕ ಯಲ್ಲಪ್ಪ, ಸಿವಿಲ್ ವಿಭಾಗ ಪ್ರಾಧ್ಯಾಪಕ ಮಧು ಪ್ರಮುಖರಾದ ಹೊನ್ನಪ್ಪ ಬಸವರಾಜ, ಶಿವು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net