

ಚಿತ್ರದುರ್ಗ: ಪ್ರಸಕ್ತ ಡಿಸೆಂಬರ್ ಅಂತ್ಯದೊಳಗೆ ದುರ್ಗೋತ್ಸವ ಮಾಡದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ಜಿಲ್ಲಾಡಳಿತಕ್ಕೆ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಎಚ್ಚರಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದುರ್ಗೋತ್ಸವ ಜಿಲ್ಲೆಯ ಜನಪ್ರತಿನಿಧಿಗಳಿಗೆ ಸ್ವಾಭಿಮಾನದ ಪ್ರಶ್ನೆ. ಆದರೆ, ಈ ಕುರಿತು ಅಸಡ್ಡೆ ತೋರಿಸುತ್ತಿದ್ದಾರೆ ಎಂದು ಬೇಸರಿಸಿದರು.
ರಾಜ್ಯ ಸರ್ಕಾರ ಮೈಸೂರು ದಸರಾ, ಹಂಪಿ, ಕೊಡಗು, ಕಿತ್ತೂರು ಸೇರಿ ಹಲವೆಡೆ ಉತ್ಸವಗಳನ್ನು ಆಚರಿಸುತ್ತ ಬಂದಿದೆ. ಆದರೆ, ಕೋಟೆನಾಡು ಚಿತ್ರದುರ್ಗವನ್ನು ಮರೆತಿರುವುದು ದುರಂತ. ಇನ್ನಾದರೂ ಎಚ್ಚೆತ್ತು ದುರ್ಗೋತ್ಸವ ಆಚರಿಸಲು ಮುಂದಾಗಬೇಕು ಎಂದು ಕೋರಿದರು.
ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಗೌರಣ್ಣ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ನಿಸಾರ್, ಅವಿನಾಶ್ ಇತರರಿದ್ದರು.