

ಬೆಳಗಾವಿ: ನಗರದಲ್ಲಿ ಶಿವ ಪ್ರತಿಷ್ಠಾನ ಹಿಂದೂಸ್ಥಾನ ಸಂಘಟನೆಯಿಂದ ಆಯೋಜಿಸಿರುವ ದುರ್ಗಾಮಾತಾ ದೌಡ್ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರದ ದೌಡ್ ನಲ್ಲಿ ಇಲ್ಲಿನ ಮರಾಠಾ ಲಘು ಪದಾತಿದಳದ ಸೇನಾಧಿಕಾರಿಗಳು ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಮ
ಮಿಲಿಟರಿ ಮಹಾದೇವ ಮಂದಿರದಿಂದ ಆರಂಭಗೊಂಡ ಮೂರನೇ ದಿನದ ದೌಡ್‌ಗೆ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಬ್ರಿಗೇಡಿಯರ್ ಜಾಯದೀಪ ಮುಖರ್ಜಿ, ಸುಬೇದಾರ ಮೇಜರ್ ಸಂದೀಪ ಖೋತ್ ಅವರು ಚಾಲನೆ ನೀಡಿದರು.
ಬಳಿಕ ಗ್ಲೋಬ್ ಟಾಕೀಸ್ ಸರ್ಕಲ್, ಛತ್ರಪತಿ ಶಿವಾಜಿ ಮಾರ್ಗ(ಹಾಯ್ ಸ್ಟ್ರೀಟ್), ಕ್ಯಾಂಪ್, ಕೊಂಡಪ್ಪ ಸರ್ಕಲ್, ಪಿಶ್ ಮಾರ್ಕೆಟ್, ತೆಲಗು ಕಾಲನಿಗಳಲ್ಲಿ ಸಂಚರಿಸಿ ಜತ್ತಿಮಠ ಬಳಿ ಸಮಾರೋಪಗೊಂಡಿತು.
ಬುಧವಾರ ನಡೆದ ದುರ್ಗಾಮಾತಾ ದೌಡ್‌ನ ದೃಶ್ಯ