ದುರ್ಗಾಪರಮೇಶ್ವರಿ ಅದ್ದೂರಿ ಮೆರವಣಿಗೆ

08-1
ಸವಸುದ್ದಿ ಗ್ರಾಮದಲ್ಲಿ ದುರ್ಗಾಪರಮೇಶ್ವರಿ ನೂತನ ಮೂರ್ತಿಯ ಮೆರವಣಿಗೆ ಜರುಗಿತು. ತವಗ ಮಠದ ಬಾಳಯ್ಯ ಸ್ವಾಮೀಜಿ ಹಾಗೂ ಪರಮಾನಂದವಾಡಿ ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಸತ್ಯಗೌಡ ಪಾಟೀಲ, ರಮೇಶ ಮಾಂಗ, ಕಾಂತೇಶ ಅಂಕಲೆ, ಧರೆಪ್ಪ ಮುತ್ನಾಳ, ಅಜ್ಜಪ್ಪಗೌಡ ಪಾಟೀಲ, ಶ್ರೀಮಂತಗೌಡ ಪಾಟೀಲ ಇತರರಿದ್ದರು.
Published on

ಮುಗಳಖೋಡ, ಬೆಳಗಾವಿ: ಸಮೀಪದ ಸವಸುದ್ದಿ ಗ್ರಾಮದಲ್ಲಿ ಈಚೆಗೆ ದುರ್ಗಾಪರಮೇಶ್ವರಿಯ ನೂತನ ಮೂರ್ತಿಯ ಭವ್ಯ ಮೆರವಣಿಗೆ ಹಾಗೂ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮ ಗುರುವಾರ ಅದ್ದೂರಿಯಾಗಿ ಜರುಗಿತು.

ನೂತನ ಮೂರ್ತಿಗೆ ಶಿವಯ್ಯ ಸ್ವಾಮೀಜಿ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು. ನಂತರ ಹಸಿರು ತೋರಣಗಳಿಂದ ಸಿಂಗರಿಸಿದ ಟ್ರ್ಯಾಕ್ಟರ್‌ನಲ್ಲಿ ದುರ್ಗಾದೇವಿಯ ನೂತನ ಮೂರ್ತಿ ಇರಿಸಿ, ಜೆಸಿಬಿ ಮೂಲಕ ಹೂವು, ಭಂಡಾರ ಸಮರ್ಪಿಸಿ ಸಂಭ್ರಮಿಸಲಾಯಿತು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯ, ಹನುಮಾನ ದೇವಸ್ಥಾನ, ವಿಠ್ಠಲ ದೇವಸ್ಥಾನ, ಗ್ರಾಪಂ ಕಾರ್ಯಾಲಯದ ಮಾರ್ಗವಾಗಿ ಮೂರ್ತಿ ಮೆರವಣಿಗೆ ದುರ್ಗಾದೇವಿ ದೇವಸ್ಥಾನ ತಲುಪಿತು.

ತವಗ ಮಠದ ಬಾಳಯ್ಯ ಸ್ವಾಮೀಜಿ ಹಾಗೂ ಪರಮಾನಂದವಾಡಿ ಅಭಿನವ ಬ್ರಹ್ಮಾನಂದ ಸ್ವಾಮೀಜಿಗಳ ಅಮೃತ ಹಸ್ತದಿಂದ ದುರ್ಗಾದೇವಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಿತು. ನಂತರ ಅನ್ನ ಸಂತರ್ಪಣೆ ನೆರವೇರಿತು.

ದುರ್ಗಾದೇವಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಸತ್ಯಗೌಡ ಪಾಟೀಲ, ಉಪಾಧ್ಯಕ್ಷ ರಮೇಶ ಮಾಂಗ, ಕಾರ್ಯದರ್ಶಿ ಕಾಂತೇಶ ಅಂಕಲೆ, ಗ್ರಾಪಂ ಅಧ್ಯಕ್ಷ ಧರೆಪ್ಪ ಮುತ್ನಾಳ, ಅಜ್ಜಪ್ಪಗೌಡ ಪಾಟೀಲ, ಶ್ರೀಮಂತಗೌಡ ಪಾಟೀಲ, ನಿಂಗಯ್ಯ ಮಠಪತಿ, ರಾಮಣ್ಣ ನಾಯಕ, ನಾಗಪ್ಪ ನವಿಲಿಹಾಳ, ದಿಲೀಪ್ ಅಂಕಲೆ, ರಾಮನಗೌಡ ಪಾಟೀಲ, ರವಿ ದೇವರಮನಿ, ಮಂಜು ದೇವರಮನಿ, ಲಕ್ಷ್ಮಣ ಕೋಳಿಕಾರ, ಲಕ್ಷ್ಮಣ ಬೆಳಕುಡ, ಪ್ರಕಾಶ ಪೂಜಾರಿ, ಯಶವಂತ ಮಾಂಗ, ಶಿವಾನಂದ ಹಾದಿಮನಿ, ಸತ್ಯಪ್ಪ ಮಾಂಗ, ಮುತ್ತಪ್ಪ ಮಾಂಗ, ಲಕ್ಕಪ್ಪ ಧರ್ಮಟ್ಟಿ, ಲಕ್ಕಪ್ಪ ಮಾಂಗ, ಶಿವಪ್ಪ ಮಾಂಗ, ಕವನ ಗೌಡ ಪಾಟೀಲ, ಲಕ್ಕಪ್ಪ ಪಾಟೀಲ, ಶಿವಾನಂದ ಹಾದಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net