ದುರ್ಗಾದೇವಿಗೆ ಬಿಸಿಪಿ ವಿಶೇಷ ಪೂಜೆ

13 HKR 03
Published on

ಹಿರೇಕೆರೂರ: ರಟ್ಟಿಹಳ್ಳಿ ತಾಲೂಕಿನ ತಿಪ್ಪಾಯಿಕೊಪ್ಪ ಗ್ರಾಮದಲ್ಲಿ ಹರಿದಿರುವ ಕುಮದ್ವತಿ ನದಿಯಿಂದ ಪಟ್ಟಣದ ಶ್ರೀ ದುರ್ಗಾದೇವಿ ಕೆರೆಗೆ ನೀರು ಹರಿಸುವ ಯೋಜನೆ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ ಮಂಗಳವಾರ ಶ್ರೀ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದುರ್ಗಾದೇವಿ ಹಾಗೂ ಕ್ಷೇತ್ರದ ಮತದಾರರ ಆಶೀರ್ವಾದದಿಂದ ನಾನು ಕೃಷಿ ಸಚಿವನಾಗಿದ್ದೇನೆ. ಕೊಟ್ಟ ಮಾತಿನಂತೆ ದುರ್ಗಾದೇವಿ ಕೆರೆಗೆ ನೀರು ತುಂಬಿಸುವ ಕಾರ್ಯ ನೆರವೇರಿಸಿದ್ದೇನೆ. ಬರುವ ದಿನಗಳಲ್ಲಿ ರಟ್ಟಿಹಳ್ಳಿ ಹಾಗೂ ಹಿರೇಕೆರೂರ ತಾಲೂಕಿನ ಎಲ್ಲ ಕೆರೆಗಳನ್ನು ತುಂಬಿಸುವ ಯೋಜನೆ ಪೂರ್ಣಗೊಳಿಸಲಾಗುವುದು’ ಎಂದರು.

ತಾಪಂ ಅಧ್ಯಕ್ಷ ರಾಜು ಬಣಕಾರ, ಪಪಂ ಸದಸ್ಯರಾದ ಮಹೇಂದ್ರ ಬಡಳ್ಳಿ, ಗುರುಶಾಂತ ಯತ್ತಿನಹಳ್ಳಿ, ಹನುಮಂತ ಕುರುಬರ, ಅಲ್ತಾಫ್​ಖಾನ್ ಪಠಾಣ, ಹರೀಶ ಕಲಾಲ್, ಜಿಪಂ ಮಾಜಿ ಸದಸ್ಯ ಮಂಜುಳಾ ಬಾಳಿಕಾಯಿ, ಮಂಜುನಾಥ ತಂಬಾಕದ, ರವಿಶಂಕರ ಬಾಳಿಕಾಯಿ, ಗೀತಾ ದಂಡಗಿಹಳ್ಳಿ, ರುದ್ರಪ್ಪ ಶೆಟ್ಟರ್, ಈರಣ್ಣ ಚಿಟ್ಟೂರ, ಮನೋಜ ಹಾರ್ನಳ್ಳಿ, ರಘು ರಂಗಕ್ಕನವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net