ದುರ್ಗಾ ಪೂಜೆಯಿಂದ ರಾಮನ ಗುಣ ವೃದ್ಧಿ

kls dsaa
ಕಳಸದ ಶ್ರೀ ದುರ್ಗಾಪೂಜಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮವನ್ನು ರಾಜಗೋಪಾಲ ಜೋಷಿ ಉದ್ಘಾಟಿಸಿದರು. ಎನ್.ಪಿ.ಭರತರಾಜ್, ಕೆ.ಎಸ್.ರಾಜೇಶ್, ಉಮೆಶ್ ಶೆಟ್ಟಿ, ಮಕ್ಕಳು ಇದ್ದರು.
Published on

ಕಳಸ: ದುರ್ಗಾ ಪೂಜೆ ಮಾಡುವುದರಿಂದ ನಮ್ಮಲ್ಲಿರುವ ರಾವಣತ್ವ ತೊಲಗಿ ರಾಮನ ತತ್ವಗಳನ್ನು ಅಳವಡಿಸಿಕೊಳ್ಳಲು ದುರ್ಗಾಮಾತೆ ದಾರಿ ಮಾಡಿಕೊಡುತ್ತಾಳೆ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಟ್ರಸ್ಟಿ ರಾಜಗೋಪಾಲ ಜೋಷಿ ಹೇಳಿದರು.

37ನೇ ವರ್ಷದ ಶ್ರೀ ದುರ್ಗಾಪೂಜಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮತನಾಡಿದ ಅವರು, ಮನುಷ್ಯನಲ್ಲಿ ರಾಮನೂ ಇದ್ದಾನೆ, ರಾವಣನೂ ಇದ್ದಾನೆ. ನಮ್ಮಲ್ಲಿ ಯಾವುದಕ್ಕೆ ಹೆಚ್ಚು ಒತ್ತು ಕೊಡುತ್ತೇವೆಯೋ ಅದು ನಮ್ಮಲ್ಲಿ ಹೆಚ್ಚಾಗುತ್ತ ಹೋಗುತ್ತದೆ. ನಮ್ಮಲ್ಲಿರುವ ರಾವಣತ್ವ ಬದಿಗಿಟ್ಟು ರಾಮನ ತತ್ವಗಳನ್ನು ಅಳವಡಿಸಿಕೊಂಡಾಗ ಜೀವನ ಸುಖಮಯವಾಗಿ ಸಾರ್ಥಕತೆಯತ್ತ ಸಾಗುತ್ತದೆ. ಅದಕ್ಕೋಸ್ಕರ ದುರ್ಗಾಪೂಜೆ ಕಾರ್ಯಕ್ರಮಗಳು ನಡೆಯಬೇಕು ಎಂದು ಹೇಳಿದರು.

ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹಳುವಳ್ಳಿ ಶ್ರೀ ಕುಮಾರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಮಹಿಷ ಮರ್ದಿನಿ ಯಕ್ಷಗಾನ ನಡೆಯಿತು.

ಹೊರನಡಿನ ಪ್ರತಿಭಾ ಜೋಷಿ, ಸಾರ್ವಜನಿಕ ದುರ್ಗಾಪೂಜಾ ಸಮಿತಿ ಅಧ್ಯಕ್ಷ ಎನ್.ಪಿ.ಭರತರಾಜ್, ಉಪಾಧ್ಯಕ್ಷ ಕೆ.ಎಸ್.ರಾಜೇಶ್, ಕೆ.ಕೆ.ಸತೀಶ್ ಕಲ್ಲಾನೆ, ಕೆ.ಕೆ.ಭಾಸ್ಕರ, ಕೆ.ದಿನೇಶ್, ಕಾರ್ಯದರ್ಶಿ ನಿರ್ಮಲಕುಮಾರ್, ಉಮೆಶ್ ಶೆಟ್ಟಿ, ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net