

ಕಲಬುರಗಿ: ದುರ್ಗಾಷ್ಟಮಿ ನಿಮಿತ್ತ ವಿಶ್ವ ಹಿಂದು ಪರಿಷತ್ ಮಹಾನಗರ ಘಟಕದಿಂದ ಗುರುವಾರ ಸಹಸ್ರಾರು ದುರ್ಗೆಯರ ದುರ್ಗಾ ದೌಡ್ ಆಯೋಜಿಸಲಾಗಿದೆ ಎಂದು ವಿಶ್ವ ಹಿಂದು ಪರಿಷತ್ ಮಹಾನಗರ ಜಿ¯್ಲÁ ಉಪಾಧ್ಯಕ್ಷೆ ಸುಮಂಗಲಾ ಚಕ್ರವರ್ತಿ ತಿಳಿಸಿದರು.
ಮಧ್ಯಾಹ್ನ ೪ಕ್ಕೆ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದವರೆಗೆ ದುರ್ಗಾ ದೇವಿಯ ಭವ್ಯ ಮೂರ್ತಿಯೊಂದಿಗೆ ಅದ್ಧೂರಿ ಶೋಭಾಯಾತ್ರೆ ಜರುಗಲಿದೆ. ೨೦೦೦ಕ್ಕೂ ಅಧಿಕ ಮಾತೆಯರು ದುರ್ಗೆ ರೂಪದಲ್ಲಿ ಭಾಗವಹಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶೋಭಾಯಾತ್ರೆ ಬಳಿಕ ವೇದಿಕೆ ಕಾರ್ಯಕ್ರಮ ನಡೆಯಲಿದೆ. ದುರ್ಗಾ ವಾಹಿನಿ ರಾಷ್ಟಿçÃಯ ಸಂಯೋಜಕಿ ಪ್ರe್ಞÁ ಪರಿಮಿತಾ ಮಹಾಲಾ ದಿಕ್ಸೂಚಿ ಭಾಷಣ ನೀಡಲಿದ್ದಾರೆ. ಎಂ.ಆರ್.ಮೆಡಿಕಲ್ ಕಾಲೇಜಿನ ಡಾ.ಮಂಗಳಾ ರುದ್ರವಾಡಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಇAದಿರಾ ಅಮರೇಶ್ವರ, ಸುನೀತಾ ಠಾಕೂರ, ಇಂದಿರಾ ರಾಠೋಡ, ಮೃಣಾಲ ಜಹಾಗಿರದಾರ, ಶಿವರಾಜ ಸಂಗೋಳಗಿ, ಅಶ್ವಿನಕುಮಾರ, ಪ್ರಶಾಂತ ಗುಡ್ಡಾ, ಸತೀಶ ಮಾಹೂರ, ಸಂತೋಷ ಇತರರಿದ್ದರು.