ದುರ್ಗಪರಮೇಶ್ವರಿ ವಾರ್ಷಿಕೋತ್ಸವ ಸಂಪನ್ನ

15 gkp 01
Published on


ಗೋಣಿಕೊಪ್ಪ: ಬೆಳ್ಳೂರು ಗ್ರಾಮದ ದುರ್ಗಪರಮೇಶ್ವರಿ ದೇವರ ವಾರ್ಷಿಕೋತ್ಸವ ಶುಕ್ರವಾರ ದೇವರ ದರ್ಶನದ ಮೂಲಕ ಸಂಪನ್ನಗೊಂಡಿತು.


ಏ.8ರಂದು ಕೊಡಿಮರ ನಿಲ್ಲಿಸುವ ಆಚರಣೆಯೊಂದಿಗೆ ವಾರ್ಷಿಕೋತ್ಸವದ ಪೂಜಾ ವಿಧಿ-ವಿಧಾನ ಆರಂಭಗೊಂಡಿತ್ತು.

ದೇವತಾ ಪ್ರಾರ್ಥನೆ, ಪಂಚಗವ್ಯ ಪುಣ್ಯಾಹವಾಚನ, ಗಣಪತಿ ಹೋಮ, ನವಕ ಕಲಶ, ಕಲಾಭಿಷೇಕ, ಮಹಾಪೂಜೆ, ಪಂಚಗವ್ಯ, ಧ್ವಜಾರೋಹಣ, ಪಂಚಗವ್ಯ ಕಲಶ, ಕಲಾಶಾಭಿಷೇಕ, ನಿತ್ಯ ಪೂಜೆ, ಪುರುಷಸೂಕ್ತ ಹೋಮ, ಮಹಾಪೂಜೆ, ತೂಚಮಂಬಲಿ, ಇರ್‌ಬೊಳಕ್, ದುಗಾಹೋಮ, ರಂಗ ಪೂಜೆ, ಅಲಂಕಾರ ಪೂಜೆ, ನೆರ್ಪು, ದೇವರ ಅವಭೃತ ಸ್ನಾನ, ದೇವರ ಪ್ರದಕ್ಷಿಣೆ, ವಸಂತಪೂಜೆ ಸಾಂಪ್ರದಾಯಿಕವಾಗಿ ಆಯಾ ದಿನಗಳಂದು ನೆರವೇರಿವು ಶನಿವಾರ ಕೊಡಿಮರ ಇಳಿಸಿ, ಕಲಶ, ಕಲಶಾಭಿಷೇಕ, ನಿತ್ಯಪೂಜೆ, ಮಹಾಪೂಜೆಯೊಂದಿಗೆ ವಾರ್ಷಿಕೋತ್ಸವ ಮುಕ್ತಾಯಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net