ದುರ್ಗದಲ್ಲಿ ಭಾವೈಕ್ಯತಾ ಉತ್ಸವ 7ರಂದು

CTD --0001
Published on

ಚಿತ್ರದುರ್ಗ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಶಿವರಾತ್ರಿ ಅಂಗವಾಗಿ ಮಾರ್ಚ್ 7 ರಿಂದ ಎರಡು ದಿನಗಳ ಕಾಲ ರಾಷ್ಟ್ರೀಯ ಭಾವೈಕ್ಯತಾ ಉತ್ಸವ ಹಾಗೂ ಶಿವಧಾಮ ಮಹೋತ್ಸವ ಆಯೋಜಿಸಿದೆ.
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಉತ್ಸವ ಏರ್ಪಡಿಸಲಾಗಿದೆ ಎಂದು ಈಶ್ವರೀಯ ವಿವಿ ಶಿವರಶ್ಮಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಹೇಳಿದರು.
7ರ ಸಂಜೆ 6 ಗಂಟೆಗೆ ಭಾವೈಕ್ಯತಾ ಉತ್ಸವಕ್ಕೆ ಜಿಪಂ ಸಿಇಒ ಎಸ್.ಜೆ. ಸೋಮಶೇಖರ್, ತ್ರಿಲೋಕ ದರ್ಶನಕ್ಕೆ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ, ಪರಿಸರ ಸಂರಕ್ಷಣಾ ಮಹೋತ್ಸವಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಎಂ.ವಿಜಯ್ ಚಾಲನೆ ನೀಡುವರು.
ಎಡಿಸಿ ಬಿ.ಟಿ.ಕುಮಾರಸ್ವಾಮಿ, ಜಿಪಂ ಡಿಎಸ್ ಡಾ.ಎಸ್.ಪಿ.ರವೀಂದ್ರ, ಎಎಂಎ ಜಿಲ್ಲಾಧ್ಯಕ್ಷ ಡಾ.ವಿಜಯಕುಮಾರ್ ಪಾಲ್ಗೊಳ್ಳಲಿದ್ದಾರೆ. ‘ಸ್ವಚ್ಛ ಮನ-ಸ್ವಚ್ಛ ಜೀವನ ಕುರಿತ’ ಕಾರ‌್ಯಾಗಾರ ಕೂಡ ಆಯೋಜಿಸಿದ್ದು, ಕನಕಾಂಬಿಕಾ ಸಂದೇಶ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
8ರ ಸಂಜೆ 6ಕ್ಕೆ ಅಂತಾರಾಷ್ಟ್ರೀಯ ಮಹಿಳಾ ಮಹೋತ್ಸವವನ್ನು ತಹಸೀಲ್ದಾರ್ ಡಾ.ಕೆ.ನಾಗವೇಣಿ, ಕಲೋತ್ಸವವನ್ನು ನಗರಸಭೆ ಆಯುಕ್ತೆ ಎಂ.ರೇಣುಕಾ ಉದ್ಘಾಟಿಸುವರು. ‘ಇಂದಿನ ಆಧುನಿಕ ಜಗತ್ತಿನಲ್ಲಿ ಮಹಿಳೆಯರ ಸವಾಲುಗಳು ಹಾಗೂ ಕಾರ‌್ಯನ್ಮೋಖ ನಿವಾರಣೆಗಳು’ ಕುರಿತ ಕಾರ‌್ಯಾಗಾರ ಆಯೋಜಿಸಲಾಗಿದ್ದು, ದಿವ್ಯಾ ಸಂದೇಶ ನೀಡುವರೆಂದು ತಿಳಿಸಿದರು.
ಪ್ರಥಮ ಬಾರಿಗೆ ಆಯೋಜಿಸಿರುವ ತ್ರಿಲೋಕ ದರ್ಶನದಲ್ಲಿ ಕಮಲದ ಮುಖೇನ ಉದ್ಭವ ಲಿಂಗು ಹಾಗೂ ಪ್ರದಕ್ಷಿಣೆ ಲಿಂಗುವಿನ ದರ್ಶನ ದೊರೆಯಲಿದೆ. ಪ್ರದಕ್ಷಿಣೆ ಹಾಕಿದಂತೆ ಶಿವಲಿಂಗದ ರೂಪದಲ್ಲಿ ಪರಿವರ್ತನೆ ಕಾಣಬಹುದಾಗಿದೆ ಎಂದ ಹೇಳಿದರು.

ಕಂಪಳೇಶ್ವರ ಸ್ವಾಮಿಗೆ ಪೂಜೆ
ಚಿತ್ರದುರ್ಗ: ಹಿರೇಗುಂಟನೂರು ಹೋಬಳಿ ಕೋಣನೂರು ಹೊರವಲಯದಲ್ಲಿರುವ ಶ್ರೀ ಕಂಪಳೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಾ.8 ಶುಕ್ರವಾದಂದು ಶಿವರಾತ್ರಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆ ವರೆಗೆ ಅಭಿಷೇಕ, ವಿಶೇಷ ಪೂಜಾ ಕಾರ್ಯಗಳು ನಡೆಯಲಿವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನ ಅರ್ಚಕ ಬುರುಜನಟ್ಟಿ ಎಚ್.ಕೃಷ್ಣಪ್ಪ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net