

ಚಿತ್ರದುರ್ಗ:ಲೋಕಸಭಾ ಚುನಾವಣೆ ಎನ್‌ಡಿಎ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಅವರು ನಗರದಲ್ಲಿ ಶುಕ್ರವಾರ ಬೆಳ್ಳಂ ಬೆಳ್ಳಗ್ಗೆ ಯಿಂದಲೇ ಮತಯಾಚನೆಗೆ ಮುಂದಾದರು.
ಎಂಎಲ್‌ಸಿ ಕೆ.ಎಸ್.ನವೀನ್,ರಾಜ್ಯಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ,ಪುತ್ರ ಉಮೇಶ್ ಕಾರಜೋಳ ಸೇರಿದಂತೆ ಪ ಕ್ಷದ ಪ್ರಮುಖರು,ಕಾರ‌್ಯಕರ್ತರೊಂದಿಗೆ ನಗರದ ವೀರ ವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣ ಮತ್ತಿತರೆಡೆ ವಾಯು ವಿಹಾರಿಗಳನ್ನು ಭೇ ಟಿ ಮಾಡಿ ಮತಯಾಚಿಸಿದರು. ಹೋಟೆಲ್ ಒಂದರಲ್ಲಿ ಕಾರ‌್ಯಕರ್ತರು,ಮುಖಂಡರೊಡಗೂಡಿ ಚಹಾ ಸೇವಿಸಿದ ಅವರು,ತರಕಾರಿಯನ್ನು ಖರೀದಿಸುವ ಮೂಲಕ ಮತಯಾಚನೆ ಮಾಡಿದರು.