

ಚಿತ್ರದುರ್ಗ: ನಗರದಲ್ಲಿ ಆರ್ಟ್ ಗ್ಯಾಲರಿ ನಿರ್ಮಿಸುವ ಮೂಲಕ ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯ ಸಿ.ಕಣ್ಮೇಶ್ ಹೇಳಿದರು. ಅಕಾಡೆಮಿ ಹಾಗೂ ಚಿತ್ರದುರ್ಗ ಚಿತ್ರ ಕಲಾವಿದರ ಬಳಗದಿ ಂದ ಮಂಗಳವಾರ ನಗರದ ಮಯೂರ ಯಾತ್ರಿ ನಿವಾಸದ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಕಲಾ ದಿನಾಚರಣೆ ಉದ್ಘಾಟಿಸಿ ಮಾತನಾ ಡಿ,ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಕಲಾವಿದರ ಸಂಖ್ಯೆ ಜಾಸ್ತಿಯಾಗುತ್ತಿದ್ದು,ಆರ್ಟ್ ಗ್ಯಾಲರಿಯ ಅಗತ್ಯವಿದೆ. ಇದರ ನಿರ್ಮಾಣದ ಬಗ್ಗೆ ಈ ಹಿಂದೆ ಒಂದಿಷ್ಟು ಪ್ರಕ್ರಿಯೆಗಳಾಗಿದ್ದರೂ ನಾನಾ ಕಾರಣಗಳಿಂದಾಗಿ ನೆನೆಗುದಿಗೆ ಬಿದ್ದಿದೆ. ಶೀಘ್ರವೇ ಜಿಲ್ಲೆಯ ಎಲ್ಲ ಕಲಾವಿದರ ಸಭೆ ನಡೆಸಿ ನಿರ್ಮಾಣ ಪ್ರಕ್ರಿಯೆಗೆ ವೇಗ ನೀಡಲಾಗುವುದು ಎಂದರು.
ಸಾವಿರಾರು ಕಥೆ,ಆಲೋಚನೆ,ಭಾವನೆಗಳನ್ನು ವ್ಯಕ್ತಪಡಿಸುವ ಶಕ್ತಿ ಚಿತ್ರಕಲೆಗಿದೆ. ಪುರಾತನ ಕಾಲದಿಂದಲೂ ಈ ಪರಂಪರೆ ಅಸ್ತಿತ್ವದಲ್ಲಿ ದೆ.ವಿಶ್ವ ವಿಖ್ಯಾತ ವರ್ಣಚಿತ್ರಕಾರ ಲಿಯನಾರ್ಡೊ ಡಾವಿನ್ಸಿ ಜನ್ಮದಿನದ ಅಂಗವಾಗಿ 2012ರಿಂದ ವಿಶ್ವ ಕಲಾ ದಿನವನ್ನು ಅಚರಿಸಿಕೊಂಡು ಬರಲಾಗಿದೆ ಎಂದರು.
ಸಾಹಿತಿ ಡಾ.ಸಂಗೇನಹಳ್ಳಿ ಅಶೋಕ್‌ಕುಮಾರ್ ಮಾತನಾಡಿ,ಕಲಾವಿದರು ಸಕಾಲಕ್ಕೂ ಸಲ್ಲುತ್ತಾರೆ. ಕಾಲಕಾ ಲಕ್ಕೆ ಎದುರಾಗುವ ಎಲ್ಲ ಅ ಡ್ಡಿ, ಆತಂಕಗಳನ್ನು ಎದುರಿಸಿ ಕಲೆಯನ್ನು ಗೆಲ್ಲುವ ಶಕ್ತಿ ಚಿತ್ರಕಲಾವಿದರಿಗೆ ಇದೆ ಎಂದು ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾ ಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್,ಚಿತ್ರಕಲಾವಿದ ಕ್ರಿಯೇಟಿವ್ ವೀರೇಶ್ ಮಾತನಾಡಿದರು.ಚಿತ್ರಕಲಾವಿದ ದಾದಾಪೀರ್ ಇಳಿ ಸಂಜೆಯ ಕೋಟೆ ದೃಶ್ಯ ಚಿತ್ರಿಸುವ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ರಂಗಕರ್ಮಿ ಕೆಪಿಎಂ ಗಣೇಶಯ್ಯ, ಚಿತ್ರಕಲಾವಿದ ಸಿದ್ದಾಪುರ ಶಿವಕುಮಾ ರ್ ಇದ್ದರು.