ದುರ್ಗಕ್ಕೆ ರಾಜ್ಯಪಾಲ ಗೆಹ್ಲೋತ್ ಭೇಟಿ

CTD 21 RAJJAYAPALA -01
Published on

ಚಿತ್ರದುರ್ಗ: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋತ್ ಶುಕ್ರವಾರ ಬೆಳಗ್ಗೆ 11.30ಕ್ಕೆ ದುರ್ಗಕ್ಕೆ ಭೇಟಿ ನೀಡಿದ್ದರು. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ರಸ್ತೆ ಮಾರ್ಗದಲ್ಲಿ ತೆರಳುವ ವೇಳೆ ನಗರದ ಪ್ರವಾಸಿ ಮಂದಿರದಲ್ಲಿ ಲಘು ವಿಶ್ರಾಂತಿ ಪಡೆದ ಬಳಿಕ ಅವರು ಶಿವಮೊಗ್ಗಕ್ಕೆ ತೆರಳಿದರು.

ಈ ವೇಳೆ ಅವರನ್ನು ಜಿಲ್ಲಾಡಳಿತದಿಂದ ಸ್ವಾಗತಿಸಿ, ಬೀಳ್ಕೋಡಲಾಯಿತು. ಎಳನೀರು, ಡ್ರೈಫ್ರೂಟ್ಸ್ ಹಾಗೂ ಪಪ್ಪಾಯ ಕೊಟ್ಟು ರಾಜ್ಯ ಪಾಲರನ್ನು ಸತ್ಕರಿಸಲಾಯಿತು. ಈ ವೇಳೆ ಅವರು ಜಿಲ್ಲೆಯ ಹಿರಿಯ ಅಧಿಕಾರಿಗಳ ಜತೆ ಕೆಲ ನಿಮಿಷಗಳ ಕಾಲ ಚರ್ಚಿಸಿದರು. ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು,ಎಸ್‌ಪಿ ಕೆ.ಪರಶುರಾಮ್,ಎಸಿ ಎಂ.ಕಾರ್ತಿಕ್,ಡಿವೈಎಸ್‌ಪಿ ಅನಿಲ್‌ಕುಮಾರ್,ತಹಸೀಲ್ದಾರ್ ಡಾ.ನಾಗವೇಣಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net