

ಚಿತ್ರದುರ್ಗ: ಕೌಟುಂಬಿಕ, ಸಾಮಾಜಿಕ ಹಿಂಸೆ ಹಾಗೂ ದೌರ್ಜನ್ಯದ ವಿರುದ್ಧ ಜನಜಾಗೃತಿಯೊಂದಿಗೆ ಎಚ್ಚರಿಕೆ ಮೂಡಿಸುವ ಸಲುವಾಗಿ 3 ಸಾವಿರ ಕಿ.ಮೀ ದೂರದ ಬೈಕ್ ರ‌್ಯಾಲಿ ಭಾನುವಾರ ನಗರ ಪ್ರವೇಶಿಸಿತು.
ವನ ಸುಮ ಟ್ರಸ್ಟ್, ಜೆಸಿಐ ಉಡುಪಿ ಸಿಟಿ, ಜೆಸಿಐ ಕಟಪಾಡಿಯಿಂದ ಹಮ್ಮಿಕೊಂಡಿರುವ ಬೈಕ್ ರ‌್ಯಾಲಿಯೂ ಕರ್ನಾಟಕ, ಗೋವಾ, ಮಹಾರಾಷ್ಟ್ರ ಮೂರು ರಾಜ್ಯಗಳಲ್ಲಿ 12 ದಿನ ಸಂಚರಿಸಲಿದೆ. ಇದೇ ವೇಳೆ ನಟ ದೃಶಾ ಕೊಡಗು, ಆತನ ಗೆಳೆಯ ಉಜ್ವಲ್ ಕಾಮತ್ ಜಾಗೃತಿ ಮೂಡಿಸಲಿದ್ದಾರೆ.
ರ‌್ಯಾಲಿಯೂ ಈಗಾಗಲೇ 2500 ಕಿ.ಮೀ ಕ್ರಮಿಸಿ ದುರ್ಗ ಪ್ರವೇಶಿಸಿದ ವೇಳೆ ಹೊರವಲಯದ ಜೆಎಂಐಟಿ ವೃತ್ತದಲ್ಲಿ ರಂಗ ನಿರ್ದೇಶಕರಾದ ಕೆ.ಪಿ.ಎಂ. ಗಣೇಶಯ್ಯ, ಧೀಮಂತ್‌ರಾಮ್, ಕೆ.ಪಿ.ಎಂ. ಗುರುದೇವ್, ಯೋಗ ಶಿಕ್ಷಕ ಎಂ.ಬಿ. ಮುರಳಿ, ರಂಗ ಸಂಘಟಕ ಪ್ರಕಾಶ್ ಬಾದರದಿನ್ನಿ ಸ್ವಾಗತಿಸಿ, ಯುವಕರನ್ನು ಸನ್ಮಾನಿಸಿದರು. ನಂತರ ಬೈಕ್ ಸವಾರರು ತುಮಕೂರಿನತ್ತ ಪ್ರಯಾಣ ಮುಂದುವರಿಸಿದರು.