

ಚಿತ್ರದುರ್ಗ: ಜನಪದ,ಕಲೆ,ಸಂಗೀತ,ಸಾಂಸ್ಕೃತಿಕ ಕಾರ‌್ಯಕ್ರಮಗಳು ಮನಸ್ಸಿಗೆ ಮುದ ನೀಡುತ್ತವೆ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕಿ ಮಹಾದೇವಿ ಮರಕಟ್ಟಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರದ ಪ್ರಜಾಸೇವಾ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ ರೋಟರಿ ಬಾಲಭವನದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ‘ಸಾಂಸ್ಕೃತಿಕ ಸಂಭ್ರಮ’ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ನಾನಾ ಜಾತಿ,ಧರ್ಮಗಳಿಂದ ಕೂಡಿರುವ ದೇಶದಲ್ಲಿ ಕಲೆ, ಸಂಸ್ಕೃತಿಗೆ ತನ್ನದೇ ಆದ ವೈಶಿಷ್ಟೃವಿದ್ದು,ಚಿತ್ರದುರ್ಗ ಜಿಲ್ಲೆಯಲ್ಲಿ ಜನಪದ ಕಲೆಗಳು ಶ್ರೀಮಂತವಾಗಿವೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ,ಕರ್ನಾಟಕದಲ್ಲಿ ಕಲೆ,ಸಾಹಿತ್ಯ,ಸಂಸ್ಕೃತಿಗೆ ಕೊರತೆಯಿಲ್ಲ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ದೊರಕಿರುವ ಭಾಷೆ ಯಾವುದಾದರೂ ಇದ್ದರೆ ಅದು ಕನ್ನಡವೆಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್,ರಂಗ ವಿಮರ್ಶಕ ಡಾ.ವಿ.ಬಸವರಾಜ್,ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಮಾತನಾಡಿದರು. ರೋಟರಿ ಕ್ಲಬ್ ಚಿನ್ಮೂಲಾದ್ರಿ ಅಧ್ಯಕ್ಷ ಎಂ.ಬಿ.ಶಂಕರಪ್ಪ, ಕಾರ‌್ಯದರ್ಶಿ ಲಕ್ಷ್ಮೀಕಾಂತ್,ಪ್ರಜಾಸೇವಾ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ಕಾರ‌್ಯದರ್ಶಿ ಓಂಕಾರಮ್ಮ,ಇ.ಅರುಣ್‌ಕುಮಾರ್ ಇದ್ದರು.
ಎಂ.ಕೆ.ಹರೀಶ್ ಜನಪದ ಗೀತೆ,ಗಂಗಾಧರ್ ಮತ್ತು ತಂಡದವರು ಸುಗಮ ಸಂಗೀತ,ಹಿಮಂತ್‌ರಾಜ್ ಮತ್ತು ಸಂಗಡಿಗರು ಜನಪದ,ಅಂಜಿ ನಪ್ಪ ಮತ್ತು ಸಂಗಡಿಗರು ತತ್ವಪದ,ದಾಸರ ಪದ ಹಾಗೂ ನುಂಕೇಶ್ ಮತ್ತು ತಂಡದವರು ಹಾಗೂ ಎಸ್.ಮೈಲಾರಿ ಮತ್ತು ಸಂಗಡಿಗರು ವಚನ ಗೀತೆಗಳನ್ನು ಹಾಡಿದರು. ತಿಪ್ಪೇಸ್ವಾಮಿ ಮಂಜುನಾಥ್ ಮತ್ತು ಸಂಗಡಿಗರಿಂದ ಕಹಳೆ,ಉರಿಮೆ ವಾದ್ಯ,ರೇವಜ್ಜಸ್ವಾಮಿ ಮತ್ತು ಸಂಗಡಿಗರು ಭಜ ನೆ ಪದಗಳನ್ನು ಹಾಡಿದರು.