

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ಬೆಂಗಳೂರಲ್ಲಿ ಕಳೆದ ಫೆಬ್ರವರಿಯಲ್ಲಿ ಜರುಗಿದ ಜಾಗತಿಕ ಹೂಡಿಕೆದಾರರ ಸಮಾವೇಶದ ಫಲವೆಂಬಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕೈಗಾರಿಕೆಗಳಿಗೆ ಸಾವಿರಾರು ಕೋಟಿ ರೂ. ಬಂಡವಾಳ ಹೂಡಿಕೆಯ ನಿರೀಕ್ಷೆ ವ್ಯಕ್ತವಾಗಿದೆ.
ಈಗಾಗಲೇ ಹಿರಿಯೂರು ತಾಲೂಕು ಪರಮೇನಹಳ್ಳಿಯಲ್ಲಿದ್ದ ಸ್ಟೀಲ್ ಫ್ಯಾಕ್ಟರಿ ವಿಸ್ತರಣೆಗೆ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಹೊಸದಾಗಿ ಅಂದಾಜು 547 ಕೋಟಿ ರೂ. ಬಂಡವಾಳ ಹೂಡಲು ರಾಜ್ಯ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರೊಂದಿಗೆ ಕಳೆದ ಫೆ.15 ರಂದು ಎಂಒಬಿ ಮಾಡಿಕೊಂಡಿದೆ.
ಇದೇ ಕಂಪನಿ ಕೊಪ್ಪಳದ ಬೇವಿನಹಳ್ಳಿಯಲ್ಲೂ 2467 ಕೋಟಿ ರೂ. ವೆಚ್ಚದಲ್ಲಿ ಸ್ಟೀಲ್ ಫ್ಯಾಕ್ಟರಿ ವಿಸ್ತರಣೆಗೂ ಸರ್ಕಾರದ ಜತೆ ಅಗ್ರಿಮೆಂಟ್ ಮಾಡಿಕೊಂಡಿದೆ. ಪರಮೇನಹಳ್ಳಿಯಲ್ಲಿ ಅಂದಾಜು 1808, ಬೇವಿನಹಳ್ಳಿಯಲ್ಲಿ 1644 ಉದ್ಯೋಗಗಳು ಹೊಸದಾಗಿ ಸೃಷ್ಟಿಯಾಗಲಿವೆ.
ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲೇ ಸರ್ಕಾರವನ್ನು ಸಂಪರ್ಕಿಸಿರುವ ್ಕಛಿಘೆಛಿ ಕ್ಟೃಜಿಠಿಛಿ ್ಝಜಿಞಠಿಛಿ ಕಂಪನಿ, ಚಿತ್ರ ದುರ್ಗ ಜಿಲ್ಲೆಯಲ್ಲಿ ್ಟಛ್ಞಿಛಿಡಿಚ್ಝಿಛಿ ಛ್ಞಿಛ್ಟಿಜ ಕ್ಷೇತ್ರದಲ್ಲಿ ಅಂದಾಜು 50 ಸಾವಿರ ಕೋಟಿ ರೂ. ಹೂಡಿಕೆಗೆ ಮುಂದೆ ಬಂದಿದೆ ಎಂದು ಕೈಗಾರಿಕೆ ಇಲಾಖೆ ಮೂಲಗಳು ತಿಳಿಸಿವೆ.
ಇದರಿಂದ 2500 ಉದ್ಯೋಗಗಳು ಸೃಜನೆಯಾಗಲಿವೆ. ಸೋಲಾರ್ ಪ್ಯಾನಲ್/ವಿಂಡ್‌ಪವರ್‌ಗೆ ಬಂಡವಾಳ ಹೂಡಲು ಕಂಪನಿ ಚಿಂತನೆ ನಡೆಸಿದೆಯಂತೆ. ಆದರೆ, ಸರ್ಕಾರದೊಂದಿಗೆ ಇನ್ನೂ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂಬ ಮಾಹಿತಿಯನ್ನು ಇಲಾಖೆ ಕೊಟ್ಟಿದೆ.
ಪ್ರಕಾಶ್ ಸ್ಪಾಂಜ್ ಕಂಪನಿ ಹಿರಿಯೂರು-ಚಳ್ಳಕೆರೆ ಮಾರ್ಗದ ಕಾಪರಹಳ್ಳಿಯಲ್ಲಿ 2500 ಕೋಟಿ ರೂ. ಬಂಡವಾಳ ಹೂಡುತ್ತಿದ್ದು, ಮೊದಲ ಹಂತದ ಉತ್ಪಾದನೆಗೂ ಸಜ್ಜಾಗುತ್ತಿದೆ. 2022-23ರ ಸಾಲಿನಿಂದಲೇ ಈ ಯೋಜನೆ ಅನುಷ್ಠಾನಕ್ಕೆ ಕಂಪನಿ ಸಿದ್ಧತೆ ನಡೆಸಿತ್ತು. 297.17 ಎಕರೆ ಪ್ರದೇಶದಲ್ಲಿ ಸ್ಟೀಲ್ ಫ್ಯಾಕ್ಟರಿ ನಿರ್ಮಾಣವಾಗಲಿದೆ. ಮೊದಲ ಹಂತದ ಉತ್ಪಾದನೆ ಶೀಘ್ರ ಆರಂಭವಾಗಲಿದ್ದು, 1800 ಉದ್ಯೋಗಗಳು ಸೃಜನೆಯಾಗಲಿದೆ.
---
ಕೋಟ್
ಚಿತ್ರದುರ್ಗ ಜಿಲ್ಲೆಯಲ್ಲಿ 1985ರಲ್ಲಿ ಕೈಗಾರಿಕೆ ಪ್ರದೇಶ ಸ್ಥಾಪನೆ ಹೊರತು ಮತ್ತೆ ಯಾವ ಕೈಗಾರಿಕೆ ಪ್ರದೇಶ ಅಭಿವೃದ್ಧಿ ಆಗಿರಲಿಲ್ಲ. ಈಗ ಹಿರಿಯೂರು ತಾಲೂಕಲ್ಲಿ ಮೇಟಿಕುರ್ಕೆ ಕೈಗಾರಿಕಾ ಪ್ರದೇಶ ನಿರ್ಮಾಣದ ಶೇ.70 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. 2022ರಲ್ಲಿ ಯೋಜನೆ ಮಂಜೂರಾಗಿತ್ತು. ಮೇಟಿಕುರ್ಕೆ ಮತ್ತು ಕರಿಯೋಬನಹಳ್ಳಿಯ 1095 ಎಕರೆ ಪ್ರದೇಶದಲ್ಲಿ ಕೈಗಾರಿಕೆ ಪ್ರದೇಶ ಅಭಿವೃದ್ಧಿಯಾಗುತ್ತಿದೆ. ಇದರಿಂದ ಸಾಕಷ್ಟು ಕೈಗಾರಿಕೆಗಳು ಸ್ಥಾಪನೆಯಾಗಿ ಅನೇಕರಿಗೆ ಉದ್ಯೋಗ ಸಿಗಲಿದೆ ಎಂಬ ಆಶಾಭಾವನೆ ಇದೆ. ಹೊಸದುರ್ಗ ತಾಲೂಕು ಅರಳಿಹಳ್ಳಿಯ 30 ಎಕರೆ ಪ್ರದೇಶದಲ್ಲಿ ಅಪರೆಲ್ ಪಾರ್ಕ್ ಸ್ಥಾಪನೆಗೆ ಇಲಾಖೆ ಸಿದ್ಧತೆ ನಡೆಸಿದೆ.
ಬಿ. ಆನಂದ್, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಚಿತ್ರದುರ್ಗ.
---