ದುರ್ಗ ಆಖಾಡದಲ್ಲಿ 20 ಕಲಿಗಳು

ctd bnc -gm karajol--0004
Published on

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಎಸ್‌ಸಿ ಮೀಸಲು ಕ್ಷೇತ್ರಕ್ಕೆ ಏ.26ರಂದು ನಡೆಯಲಿರುವ ಚುನಾವಣೆಯಲ್ಲಿ ಅಂತಿಮವಾಗಿ 20 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಸೋಮವಾರ ನಾಮಪತ್ರ ಹಿಂಪಡೆಯುವ ಅವಧಿ ಮುಕ್ತಾಯವಾಗಿದ್ದು, ನಾಮಪತ್ರ ಪರಿಶೀಲನೆ ಬಳಿಕ ಅಂತಿಮವಾಗಿದ್ದ 24 ಅಭ್ಯರ್ಥಿಗಳ ಪೈಕಿ, ನಾಲ್ವರು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರ ಎಂ.ಪಿ.ದಾರಕೇಶ್ವರಯ್ಯ (ಬೇಡಜಂಗಮ ಜಾತಿ ಪ್ರಮಾಣ ಪತ್ರ) ಕಣದಲ್ಲಿ ಉಳಿದಿದ್ದಾರೆ. ತಮ್ಮ ಸಹೋದರ ಕಣದಿಂದ ಹಿಂದೆ ಸರಿಯಲಿದ್ದಾರೆಂಬ ವಿಶ್ವಾಸವನ್ನು ರೇಣುಕಾಚಾರ್ಯ ವ್ಯಕ್ತಪಡಿಸಿದ್ದರು. ಆದರೆ, ದಾರುಕೇಶ್ವರಯ್ಯ ಅವರು ಬೇಡ ಜಂಗಮ ಪ್ರಮಾಣಪತ್ರ ಆಧರಿಸಿ ಸ್ಪರ್ಧಿಸಿದ್ದಾರೆ. ಅವರ ಪತ್ನಿ ಎಂ.ಇ.ಸುಜಾತಾ ಕೂಡ ನಾಮಪತ್ರ ಸಲ್ಲಿಸಿದ್ದರು. ಆದರೆ, ಅವರ ನಾಮಪತ್ರ ಪರಿಶೀಲನೆ ವೇಳೆ ತಿರಸ್ಕೃತಗೊಂಡಿತ್ತು.
*ಕಣದಲ್ಲಿ: ಬಹುಜನ ಸಮಾಜ ಪಾರ್ಟಿಯ ಅಶೋಕ ಚಕ್ರವರ್ತಿ, ಬಿಜೆಪಿ-ಗೋವಿಂದ ಮಕ್ತಪ್ಪ ಕಾರಜೋಳ, ಕಾಂಗ್ರೆಸ್-ಬಿ.ಎನ್.ಚಂದ್ರಪ್ಪ, ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ಸಿ.ಎನ್.ನರಸಿಂಹರಾಜು, ಉತ್ತಮ ಪ್ರಜಾಕೀಯ ಪಾರ್ಟಿಯ ಟಿ.ರಮೇಶ್‌ನಾಯ್ಕ, ಇಂಡಿಯನ್ ಮೂವ್‌ಮೆಂಟ್ ಪಾರ್ಟಿಯ ಬಿ.ಟಿ.ರಾಮಸುಬ್ಬಯ್ಯ, ಕರುನಾಡ ಸೇವಕರ ಪಕ್ಷದ ಆರ್.ಶಬರೀಶ್, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಡಿ.ಸುಜಾತಾ, ಪಕ್ಷೇತರ ಅಭ್ಯರ್ಥಿಗಳಾದ ಅಮೃತರಾಜ, ಗಣೇಶ್, ಎಚ್.ತುಳಸಿ, ಎಂ.ಪಿ.ದಾರಕೇಶ್ವರಯ್ಯ, ಕೆ.ನರಸಿಂಹಮೂರ್ತಿ, ನಾಗರಾಜಪ್ಪ, ವಿ.ಎಸ್.ಭೂತರಾಜ, ಟಿ.ಮಂಜುನಾಥಸ್ವಾಮಿ, ಎಸ್.ರಘುಕುಮಾರ್, ಬಿ.ವೆಂಕಟೇಶ್, ಎಸ್.ಎಚ್.ಶ್ರೀನಿವಾಸ, ಆರ್.ಸುಧಾಕರ ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.
*ನಾಮಪತ್ರ ಹಿಂಪಡೆದವರು: ಪಕ್ಷೇತರ ಅಭ್ಯರ್ಥಿಗಳಾದ ಕೃಷ್ಣಮೂರ್ತಿ, ಆರ್.ದಾಸಪ್ಪ, ಟಿ.ದೇವರಾಜ, ಕೆ.ಶಿವಲಿಂಗಪ್ಪ ನಾಮಪತ್ರಗಳನ್ನು ಹಿಂಡೆಯುವ ಮೂಲಕ ಕಣದಿಂದ ಹಿಂದೆ ಸರಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net