

ಇಳಕಲ್ಲ (ಗ್ರಾ): ಮಾನವ ಜೀವ ಬದುಕಿದೆ ಎಂದರೆ ಅದಕ್ಕೆ ಪರಿಸರ ಕಾರಣ. ಮನುಷ್ಯನ ಆಸೆಗೆ ಪರಿಸರ ಬಲಿಯಾಗುತ್ತಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಕಂದಗಲ್ಲ ಗ್ರಾಮದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ಇಲ್ಲದೆ ಮನುಷ್ಯ ಬದುಕಿರಲಾರ. ಆಹಾರ ಪದಾರ್ಥಗಳು ವಿಷವಾಗಿ ಬದಲಾಗುತ್ತಿವೆ. ಮನುಷ್ಯನ ಆಸೆಗೆ ಸುಂದರವಾಗಿರುವ ಅರಣ್ಯ ಪ್ರದೇಶಗಳು, ಪರಿಸರ ನಾಶವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಗತಿಪರ ರೈತ ಚನ್ನಪ್ಪಗೌಡ ನಾಡಗೌಡ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ಗಿಡ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪರಿಸರದ ಜಾಗೃತಿಯನ್ನು ವಿದ್ಯಾರ್ಥಿಗಳಿಗೆ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ಬಸವರಾಜ ಅಳ್ಳೊಳ್ಳಿ ಇತರರಿದ್ದರು.