ದುರಸ್ತಿಯಾಗಿ 3 ತಿಂಗಳಲ್ಲೇ ರಸ್ತೆ ಹಾಳು

20 RON 1 A
Published on

ರೋಣ: ತಾಲೂಕಿನ ಸವಡಿ ಗ್ರಾಮದ ಯರೇಸಿಗಮ್ಮ ದೇವಸ್ಥಾನಕ್ಕೆ ಹೋಗುವ ರಸ್ತೆ ನಿರ್ಮಾಣ ಕಾಮಗಾರಿ ಮುಗಿದ ಮೂರು ತಿಂಗಳಲ್ಲೇ ಸಂಪೂರ್ಣ ಕಿತ್ತು ಹೋಗಿದೆ. ಡಾಂಬರ್ ಪದರು, ಜಲ್ಲಿ ಕಲ್ಲುಗಳು ಕಿತ್ತು ಮೇಲೆ ಬಂದಿರುವುದರಿಂದ ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ.

ಬಹುದಿನಗಳಿಂದ ದುರಸ್ತಿ ಕಾಣದ ರಸ್ತೆಯನ್ನು ಮೂರು ತಿಂಗಳ ಹಿಂದಷ್ಟೇ ಅಭಿವೃದ್ಧಿಪಡಿಸಲಾಗಿತ್ತು. ಆದರೆ, ದುರಸ್ತಿಯಾದ ಕೆಲವೇ ದಿನಗಳಲ್ಲಿ ರಸ್ತೆಯ ಬಹುಭಾಗ ಕಿತ್ತುಹೋಗಿದೆ. ಇದಕ್ಕೆ ಕಾಮಗಾರಿ ಕಳಪೆಯಾಗಿರುವುದೇ ಇದಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಜಿಪಂನ ನಬಾರ್ಡ್ ಯೋಜನೆಯಡಿ 1 ಕೋಟಿ ರೂ. ವೆಚ್ಚದಲ್ಲಿ ಮೂರು ಕಿ.ಮೀ. ರಸ್ತೆ ನಿರ್ಮಾಣ ಕಾರ್ಯವನ್ನು ಮೂರು ತಿಂಗಳ ಹಿಂದೆ ಕೈಗೊಳ್ಳಲಾಗಿತ್ತು. ಹೊಸದಾಗಿ ನಿರ್ವಣವಾಗಿರುವ ರಸ್ತೆಯ ಬಹುಭಾಗ ಕಿತ್ತು ಹೋಗಿರುವುದರಿಂದ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ರಸ್ತೆ ಕಾಮಗಾರಿ ಕಳಪೆಯಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿ ವೇಳೆ ನಿಗಾ ವಹಿಸಿಲ್ಲ ಎಂದು ಗ್ರಾಮಸ್ಥರಾದ ಮುತ್ತಣ್ಣ ಪವಾಡಶೆಟ್ಟಿ, ಶರಣಬಸಪ್ಪ ಮಂಗಳೂರ, ಮಹಮ್ಮದ್ ರಫೀಕ್ ಕರ್ನಾಚಿ, ಚೆನ್ನಬಸಯ್ಯಾ ಹಿರೇಮಠ, ಇತರರು ದೂರಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net