ದುಡಿವ ವರ್ಗಕ್ಕೆ ಸರ್ಕಾರಗಳ ಕಡಿವಾಣ

FotoJet (1)
Published on

ರಾಜ್ಯ ಕಾರ್ಯಕಾರಿ ಮಡಳಿ ಸದಸ್ಯ ಜಿ ಸಿ ಬೈಯಾರೆಡ್ಡಿ ಅಸಮಾಧಾನ

ಹೊಸಕೋಟೆ : ದುಡಿಯುವ ವರ್ಗಕ್ಕೆ ಸರ್ಕಾರಗಳು ಕಡಿವಾಣ ಹಾಕಿವೆ, ಹೊರಗುತ್ತಿಗೆ ಆಧಾರದಲ್ಲಿ ಮೂರ‌್ನಾಲ್ಕು ವರ್ಷ ದುಡಿಸಿಕೊಂಡು ನಂತರ ಅವರನ್ನು ಕೆಲಸದಿಂದ ಹೊರಹಾಕಲಾಗುತ್ತಿದೆ ಎಂದು ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಜಿ.ಸಿ.ಬೈಯಾರೆಡ್ಡಿ ಬೇಸರಿಸಿದರು.

ನಗರದ ವೆಂಕಟಾದ್ರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಿಪಿಐ(ಎಂ) ಪಕ್ಷದಿಂದ ಆಯೋಜಿಸಿದ್ದ ಜಿಲ್ಲಾ 4ನೇ ಸಮ್ಮೇಳನದಲ್ಲಿ ಮಾತನಾಡಿದರು. 30 ವರ್ಷ ದಾಟಿದ ಕಾರ್ಮಿಕರಿಗೆ ಖಾಸಗಿ ಸಂಸ್ಥೆಗಳು ಕೆಲಸ ನೀಡುತ್ತಿಲ್ಲ, ಇದಕ್ಕೆಲ್ಲ್ಲ ಕಾರಣ ಕಾರ್ಪೋರೇಟ್ ಸಂಸ್ಥೆಗಳು. ಸರ್ಕಾರ ಕಾರ್ಮಿಕ ಕಾನೂನಿನಲ್ಲಿ ಮಾಡಿರುವ ಬದಲಾವಣೆ ಕಾರ್ಮಿಕರ ಕೈಗಳನ್ನು ಕಟ್ಟಿ ಹಾಕಿವೆ. ಆದರೆ ರೈತರು, ಕಾರ್ಮಿಕ ವರ್ಗ, ದುಡಿಯುವ ವರ್ಗಕ್ಕೆ ಸಿಪಿಐ(ಎಂ) ಧ್ವನಿಯಾಗಿರುತ್ತದೆ ಎಂದರು.

ರೈತರಿಂದ ಭೂಮಿ ಕಬಳಿಸುವ ಸರ್ಕಾರಗಳು ಸೂಕ್ತ ಬೆಲೆ ನೀಡುತಿಲ್ಲ, ಬೆಳೆಗಳಿಗೆ ಬೆಂಬಲ ಬೆಲೆ ನೀಡದೆ ರೈತರನ್ನು ಸೊರಗುವಂತೆ ಮಾಡಿ ಕೃಷಿಯಿಂದ ದೂರವಾಗುವಂತೆ ಪರೋಕ್ಷವಾಗಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಿರುದ್ಯೋಗ ಹಾಗೂ ಆಹಾರದ ಕೊರತೆ ಕಾಡಲಿದೆ. ಈಗ ದೇಶದಲ್ಲಿ ಶೇ.9 ನಿರುದ್ಯೋಗವಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ದೊಡ್ಡದಾಗಲಿದೆ. ಜನರು ಬಾರಿ ತೊಂದರೆಗಳನ್ನು ಅನುಭವಿಸಬೇಕಿದೆ ಎಂದು ಅಸಮಾಧಾನ ಹೊರಹಾಕಿದರು.

ನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ವೇದಿಕೆ ಕಾರ್ಯಕ್ರಮದತ್ತ ನೂರಾರು ಕಾರ್ಯಕರ್ತರು ಮೆರವಣಿಗೆ ಮಾಡಿದರು.

ಭದ್ರತೆ ಒದಗಿಸಿ

ಕೋಲಾರ ಭಾಗದಲ್ಲಿ ಬೃಹತ್ ಮೊಬೈಲ್ ತಯಾರಿಕಾ ಕಾರ್ಖಾನೆ ಇದ್ದು, ಅಲ್ಲಿ 20 ಸಾವಿರಕ್ಕೂ ಅಧಿಕ ಕಾರ್ಮಿಕರಿದ್ದಾರೆ, ಅಲ್ಲಿ ಕಾಯಂ ಕಾರ್ಮಿಕರ ಸಂಖ್ಯೆ ಒಂದು ಸಾವಿರವಿದೆ, ಉಳಿದವರು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಯಾವಾಗ ಬೇಕಾದರೂ ಮನೆಗೆ ಕಳುಹಿಸಬಹುದು, ಸರ್ಕಾರ ಕಾರ್ಮಿಕರಿಗೆ ಕೆಲಸದ ಭದ್ರತೆ ನೀಡಬೇಕು ಸಿಪಿಐ(ಎಂ) ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯೆ ವರಲಕ್ಷ್ಮೀ ಒತ್ತಾಯಿಸಿದರು.

ಲೂಟಿಗೆ ಬೀಳಲಿ ಕಡಿವಾಣ

ಜನರಿಂದ ತೆರಿಗೆ ಪಡೆಯುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನೋಪಯೋಗಿ ಕಾರ್ಯಗಳಿಗಿಂತ ಜನರಿಗೆ ತೊಂದರೆಯಾಗುವ ಕಾರ್ಯಗಳನ್ನೇ ಹೆಚ್ಚು ಮಾಡುತ್ತಿದೆ, ದೇಶದ ಬೆನ್ನೆಲುಬು ರೈತ ಎನ್ನುವ ಸರ್ಕಾರಗಳು ಬೆಳೆಗಳಿಗೆ ಬೆಂಬಲ ಬೆಲೆ ೋಷಣೆ ಮಾಡಿಲ್ಲ, ಕಾಟಾಚಾರಕ್ಕೆ ಬೆರಳೆಣಿಕೆಯಷ್ಟು ಬೆಳೆಗಳಿಗೆ ಬೆಂಬಲ ಬೆಲೆ ೋಷಿಸಿ, ರೈತರು ಖರೀದಿಸುವ ಬಹುತೇಕ ಎಲ್ಲ ಕೃಷಿ ಸಂಬಂಧಿತ ವಸ್ತುಗಳ ಮೇಲೆ ತೆರಿಗೆ ವಿಧಿಸುತ್ತಿವೆ, ಸಾರ್ವಜನಿಕರು ಖರೀದಿಸುವ ಪ್ರತಿ ವಸ್ತುಗಳಿಗೆ ತೆರಿಗೆ ವಸೂಲಿ ಮಾಡಿ ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದೆ, ಇದು ನಿಲ್ಲಬೇಕು, ಸಮಾಜದಲ್ಲಿ ಜನಪರ ಆಡಳಿತ ನೀಡುವ ಪಕ್ಷ ಆಡಳಿತಕ್ಕೆ ಬಂದು ಸಮಾಜದಲ್ಲಿ ಬದಲಾವಣೆಯ ಬೆಳಕು ಕಾಣಬೇಕು ಎಂದು ಹೊಸಕೋಟೆ ಸಿಪಿಐ(ಎಂ) ಅಧ್ಯಕ್ಷ ಹರೀಂದ್ರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net